ದತ್ತೋಪಂಥ್ ಠೇಂಗಡಿ ಸ್ಮೃತಿ ದಿನಾಚರಣೆ
ಕಾಸರಗೋಡು: ಭಾರತದ ಪರಂಪರೆಗೆ ಅನುಸಾರವಾಗಿ ಕಾರ್ಮಿಕ ಸಂಘಟನೆಯನ್ನು ರೂಪಿಸಿದ ಭಗೀರಥನಾಗಿದ್ದಾರೆ ದಿ| ದತ್ತೋಪಂಥ್ ಠೇಂಗಡಿಯವರೆಂದು ನ್ಯಾಯವಾದಿ ಪಿ. ಮುರಳೀಧರನ್ ನುಡಿದರು. ಭಾರತೀಯ ಮಜ್ದೂರ್ ಸಂಘ ಕಾಸರಗೋಡು ಜಿಲ್ಲಾ ಸಮಿತಿ ಆಯೋಜಿಸಿದ ಠೇಂಗಡಿಯವರ ಸ್ಮೃತಿ ದಿನಾಚರಣೆ ಉದ್ಘಾಟಿಸಿ ಬಿಎಂಎಸ್ ರಾಜ್ಯ ಕಾರ್ಯದರ್ಶಿ ಯಾಗಿರುವ ಮುರಳೀಧರನ್ ಪಿ. ನುಡಿದರು. ಜಿಲ್ಲಾ ಸಮಿತಿ ಅಧ್ಯಕ್ಷ ವಿ.ವಿ. ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಪದಾಧಿಕಾರಿಗಳಾದ ಎಂ.ಕೆ. ರಾಘವನ್, ಟಿ. ಕೃಷ್ಣನ್, ಶ್ರೀನಿವಾಸನ್ ಕೆ.ಎ, ವಿಶ್ವನಾಥ ಶೆಟ್ಟಿ, ಗೀತಾ ಬಾಲಕೃಷ್ಣನ್ ವಿ.ಬಿ. ಸತ್ಯನಾಥ್, ಕೆ.ವಿ. ಬಾಬು, ಪಿ. ಕೃಷ್ಣ ಕುಮಾರ್, ಕೆ. ಉಪೇಂದ್ರನ್, ಸಿಂಧೂ ಮನೋರಾಜ್, ಪಿ. ಮುರಳೀಧರನ್, ಹರೀಶ್ ಕುದ್ರೆಪ್ಪಾಡಿ ಭಾಗವಹಿಸಿದರು. ಜಿಲ್ಲಾ ಕಾರ್ಯದರ್ಶಿ ಗೋವಿಂದನ್ ಮಡಿಕೈ ಸ್ವಾಗತಿಸಿ, ಜಿಲ್ಲಾ ಕೋಶಾಧಿಕಾರಿ ಅನಿಲ್ ಬಿ. ನಾಯರ್ ವಂದಿಸಿದರು.