ಧರ್ಮತ್ತಡ್ಕ ಪ್ರೌಢಶಾಲೆಯಲ್ಲಿ ಶಾಲಾ ಕಲೋತ್ಸವ

ಧರ್ಮತ್ತಡ್ಕ: ಇಲ್ಲಿನ ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆಯ ಪ್ರೌಢಶಾಲಾ ವಿಭಾಗದ ಶಾಲಾ ಕಲೋತ್ಸವ ನಡೆಯಿತು. ಲೇಖಕಿ ಪ್ರಸ್ನನ ವಿ. ಚೆಕ್ಕೆಮನೆ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಏಷ್ಯಾದಲ್ಲೇ ಅತೀ ದೊಡ್ಡ ಉತ್ಸವಗಳಲ್ಲೊಂದಾದ ಕೇರಳ ಶಾಲಾ ಕಲೋತ್ಸವವು ಮಕ್ಕಳಲ್ಲಿ ಅಡಕವಾಗಿರುವ ಸುಪ್ತ ಪ್ರತಿಭೆಯನ್ನು ಹೊರತರುವ ಉತ್ತಮ ವೇದಿಕೆಯಾಗಿದ್ದು, ಉತ್ಸಾಹದಿಂದ ಪಾಲ್ಗೊಳ್ಳಬೇಕೆಂದರು. ಪಿ.ಟಿ.ಎ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಕುಡಾಲ್ ಅಧ್ಯಕ್ಷತೆ ವಹಿಸಿದರು. ಶಾಲಾ ವ್ಯವಸ್ಥಾಪಕ ಶಂಕರ ನಾರಾಯಣ ಭಟ್, ಮುಖ್ಯೋಪಾಧ್ಯಾಯ ಇ.ಎಚ್. ಗೋವಿಂದ ಭಟ್, ಎಂ.ಪಿ.ಟಿ.ಎ ಅಧ್ಯಕ್ಷೆ ದಿವ್ಯಭಾರತಿ, ಸ್ಟಾಫ್ ಸೆಕ್ರೆಟರಿ ರಾಮಕೃಷ್ಣ ಭಟ್, ಕಲೋತ್ಸವ ಕನ್ವೀನರ್ ತುಳಸಿ ಕೆ, ಸಂಸ್ಕೃತೋತ್ಸವ ಕನ್ವೀನರ್ ಶಿವನಾರಾಯಣ ಭಟ್ ಶುಭಕೋರಿದರು. ಉಮಾದೇವಿ ಸ್ವಾಗತಿಸಿ , ವಿಚೇತ ವಂದಿಸಿದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶಶಿಧರ ಕೆ., ಪ್ರಶಾಂತ ಹೊಳ್ಳ ಮÁತನಾಡಿದರು.

RELATED NEWS

You cannot copy contents of this page