ಮೀಂಜ: ನವೆಂಬರ್ 18ರಂ ದು ಪೈವಳಿಕೆ ನಗರ ಶಾಲೆಯಲ್ಲಿ ನಡೆಸುವ “ನವ ಕೇರಳ ಸದಸ್ಸ್” ನ ಯಶಸ್ವಿಗಾಗಿ ಮೀಂಜ ಪಂಚಾಯತ್ ಮಟ್ಟದ ಸ್ವಾಗತ ಸಮಿತಿ ರೂಪೀಕರಿಸ ಲಾಯಿತು. ಮೀಂಜ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆಯನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಉದ್ಘಾಟಿಸಿದರು. ಪಂಚಾಯತ್ ಅಧ್ಯಕ್ಷೆ ಸುಂದರಿ ಆರ್ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಪಂಚಾ ಯತ್ ಉಪಾಧ್ಯಕ್ಷ ಜಯರಾಮ ಬಲ್ಲಂಗುಡೇಲು, ಬ್ಲಾಕ್ ಪಂಚಾಯತ್ ಸದಸ್ಯರಾದ ಕೆ ವಿ ರಾಧಾಕೃಷ್ಣ ಭಟ್, ಸ್ಟಾಡಿಂಗ್ ಕಮಿಟಿ ಚೆಯರ್ ಮೆನ್ ಬಾಬು ಕುಳೂರು, ಸರಸ್ವತಿ ಎಲಿ ಯಾಣ, ರುಕ್ಯ ಸಿದ್ದಿಕ್, ರಾಮಕೃಷ್ಣ ಕಡಂಬಾರ್, ಡಿ. ಕಮಲಾಕ್ಷ ಭಾಗವಹಿ ಸಿದರು. ವಿವಿಧ ಇಲಾಖೆಗಳ ಉದ್ಯೋ ಗಸ್ಥರು, ಅಂಗನವಾಡಿ ಆಶಾ ವರ್ಕ ರ್ಸ್, ಕುಟುಂಬಶ್ರೀ ಕಾರ್ಯಕರ್ತೆ ಯರು ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು. ಮೀಂಜ ಪಂಚಾಯತ್ ಕಾರ್ಯದರ್ಶಿ ಸುರೇಶ್ ಸ್ವಾಗತಿಸಿದರು.
