ನಾಪತ್ತೆಯಾಗಿದ್ದ ಗುತ್ತಿಗೆದಾರನ ಮೃತದೇಹ ಶಿರಿಯ ಹೊಳೆಯಲ್ಲಿ ಪತ್ತೆ

ಉಪ್ಪಳ: ನಾಪತ್ತೆಯಾಗಿದ್ದ ಗುತ್ತಿಗೆದಾರನ ಮೃತದೇಹ ಶಿರಿಯ ಹೊಳೆಯಲ್ಲಿ ಪತ್ತೆಯಾಗಿದೆ. ಉಪ್ಪಳ ಬಳಿಯ ಮಣ್ಣಂಗುಳಿ ನಿವಾಸಿ ನಿರ್ಮಾಣ ಗುತ್ತಿಗೆದಾರರಾದ ಇಬ್ರಾಹಿಂರ ಪುತ್ರ ಗುತ್ತಿಗೆದಾರ ಶರೀಫ್ (32)ರ ಮೃತದೇಹ ನಿನ್ನೆ ಮಧ್ಯಾಹ್ನ ಶಿರಿಯ ಹೊಳೆಯ ಬೇರಿಕೆ ಎಂಬಲ್ಲಿ ಪತ್ತೆಯಾಗಿದೆ.
ಮಂಗಳವಾರ ಸಂಜೆ 6 ಗಂಟೆಗೆ ಸ್ಕೂಟರ್‌ನಲ್ಲಿ ಮನೆಯಿಂದ ತೆರಳಿದ ಇವರು ಬಳಿಕ ನಾಪತ್ತೆಯಾಗಿದ್ದರು. ಈ ಬಗ್ಗೆ ಲಬಿsಸಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದರು. ಅಂದು ರಾತ್ರಿ ಸುಮಾರು 7.30ರ ವೇಳೆ ಶಿರಿಯ ಹೊಳೆಯ ಸೇತುವೆ ಬಳಿ ಶರೀಫ್‌ರ ಸ್ಕೂಟರ್ ಪತ್ತೆಯಾಗಿತ್ತು. ಅವರಿಗಾಗಿ ವ್ಯಾಪಕ ಹುಡುಕಾಟ ನಡೆಯುತ್ತಿರುವ ಮಧ್ಯೆ ನಿನ್ನೆ ಇವರ ಮೃತದೇಹ ಪತ್ತೆಯಾಗಿದೆ.
ಈ ಬಗ್ಗೆ ಮಾಹಿತಿ ತಿಳಿದು ಶಿರಿಯ ಕೋಸ್ಟಲ್ ಪೊಲೀಸರು ತೆರಳಿ ಮೃತದೇಹವನ್ನು ದಡಕ್ಕೆ v
Àಲುಪಿಸಿ, ಮಂಜೇಶ್ವರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಹಾಗೂ ಸಂಬAಧಿಕರು ತಲುಪಿ ಮೃತದೇಹವ ಗುರುತು ಪತ್ತೆ ಹಚ್ಚಿದ್ದಾರೆ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಶವ ಮಹಜರು ನಡೆಸಿ ನಿನ್ನೆ ರಾತ್ರಿ ಮಣ್ಣಂಗುಳಿ ಜುಮಾ ಮಸೀದಿ ಬಳಿ ಅಂತ್ಯಸAಸ್ಕಾರ ನಡೆಸಲಾಯಿತು. ಮೃತರು ತಂದೆ, ಪತ್ನಿ ಹಸೀನ, ಮಕ್ಕಳಾದ ಮುಮ್ತಾಸ್, ಇಬ್ರಾಹಿಂ ಮಾಸಿಲ್, ಯಾಸಿರ್, ಸಹೋದರಿ ಭೀಫಾತಿಮ್ಮ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

RELATED NEWS

You cannot copy contents of this page