ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು:  ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ಬೇಡಡ್ಕ ಕಾಮಲಂ ತೆಕ್ಕೇಕೆರೆಯ ನಿವಾಸಿ ಹಾಗೂ ಕುಂಡಂಕುಳಿ ಸಹಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್ ಟು ವಿದ್ಯಾರ್ಥಿನಿ ಅಶ್ವತಿ (17) ಸಾವನ್ನಪ್ಪಿದ ಯುವತಿ. ಈಕೆ ನಿನ್ನೆ ಬೆಳಿಗ್ಗೆ ನಾಪತ್ತೆಯಾಗಿದ್ದಳು. ಮನೆಯವರು ಆಕೆಗಾಗಿ ವ್ಯಾಪಕ ಶೋಧ ಆರಂಭಿಸಿರುವಂತೆಯೇ, ನಿನ್ನೆ ರಾತ್ರಿ ಮನೆ ಪಕ್ಕದ ಕಟ್ಟೆ ಇಲ್ಲದ ಬಾವಿಯಲ್ಲಿ ಊರವರು ಅಶ್ವತಿಯ ಮೃತದೇಹ ಪತ್ತೆಹಚ್ಚಿದ್ದಾರೆ.

ಮೃತದೇಹವನ್ನು ನಂತರ ಬಾವಿಯಿಂದ ಮೇಲಕ್ಕೆತ್ತಿ ಮರಣೋ ತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಲಾಯಿತು. ಬೇಡಗಂ ಪೊಲೀಸರು ಈ ಬಗ್ಗೆ ಪ್ರಕ ರಣ ದಾಖಲಿಸಿ ತನಿಖೆ ಆರಂಭಿಸಿ ದ್ದಾರೆ. ಮೃತಳು ತಂದೆ ಎಂ. ಬಾಲ ಕೃಷ್ಣನ್, ತಾಯಿ ಸತಿ, ಸಹೋದರ ಅಭಿಜಿತ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾಳೆ.

RELATED NEWS

You cannot copy contents of this page