ನಿಗೂಢ ಸ್ಥಿತಿಯಲ್ಲಿ ಸಾವಿಗೀಡಾದ ಯುವಮೋರ್ಛಾ ನೇತಾರನ ತಂದೆ ಸಮುದ್ರಕ್ಕೆ ಹಾರಿ ಆತ್ಮಹತ್ಯೆ
ಕುಂಬಳೆ: ನಿಗೂಢ ರೀತಿ ಯಲ್ಲಿ ಸಾವಿಗೀಡಾದ ಯುವ ಮೋರ್ಛಾ ನೇತಾರನ ತಂದೆ ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೈದ ದಾರುಣ ಘಟನೆ ನಡೆದಿದೆ.
ಬಂಬ್ರಾಣ ಕಲ್ಕುಳದ ಮೂಸ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದ ಲೋಕನಾಥ್ (೫೧) ಎಂಬವರು ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾರೆ.
ಕಳೆದ ಸೋಮವಾರ ಬೆಳಿಗ್ಗೆ ೯ ಗಂಟೆ ವೇಳೆ ಇವರು ಮನೆಯಿಂದ ಹೊರಗೆ ತೆರಳಿದ್ದರು. ತೆರಳುವಾಗ ಅವರ ಮೊಬೈಲ್ ಫೋನ್ ನ್ನು ಮನೆಯಲ್ಲೇ ಬಿಟ್ಟು ಹೋಗಿದ್ದರು. ಮಧ್ಯಾಹ್ನ ೧೨ ಗಂಟೆ ವೇಳೆ ಅವರ ಮೃತದೇಹ ಉಳ್ಳಾಲ ಸಮುದ್ರದಲ್ಲಿ ಪತ್ತೆಯಾಗಿದೆ.
ಇದೇ ವೇಳ ಲೋಕನಾಥ ಅವರು ಮನೆಯಿಂದ ತೆರಳುವ ಮುಂಚೆ ಸ್ನೇಹಿತರಿಗೆ ಮೊಬೈಲ್‌ನಲ್ಲಿ ವಾಟ್ಸಪ್ ಮೂಲಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸಂದೇಶ ರವಾನಿಸಿದ್ದರೆಂದು ತಿಳಿದುಬಂದಿದೆ. ತಾನು ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿಯೂ ತನ್ನ ಹಾಗೂ ಮಗ ರಾಜೇಶ್‌ನ ಸಾವಿಗೆ ಕಾರಣ ನಾಲ್ಕು ಮಂದಿಯಾಗಿ ದ್ದಾರೆಂದು ಸಂದೇಶದಲ್ಲಿ ತಿಳಿಸಿ ದ್ದರೆಂದು ಹೇಳಲಾಗುತ್ತಿದೆ.
ಸಂದೇಶ ಲಭಿಸಿದ ಸ್ನೇಹಿತರು ಅವರ ಮೊಬೈಲ್‌ಗೆ ಕರೆ ಮಾಡಿ ದ್ದರು. ಅಷ್ಟರೊಳಗೆ ಲೋಕನಾಥ ಮನೆಯಿಂದ ಹೊರಗೆ ತೆರಳಿದ್ದರು. ಇದರಿಂದ ಫೋನ್ ಕರೆಯನ್ನು ಮನೆ ಮಂದಿ ಸ್ವೀಕರಿಸಿದ್ದರು. ಸ್ನೇಹಿತರಿಂದ ವಿಷಯ ತಿಳಿದ ಮನೆಯವರು ಆ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಗೆ ತಿಳಿಸಿದ್ದರೆನ್ನ ಲಾಗುತ್ತಿದೆ. ಅದೇ ದಿನ ಮಧ್ಯಾಹ್ನ ೧೨ ಗಂಟೆ ವೇಳೆ ಲೋಕನಾಥರ ಮೃತದೇಹ ಸಮುದ್ರದಲ್ಲಿ ಪತ್ತೆಯಾಗಿದೆ. ಮೃತದೇಹದ ಮರಣೋತ್ತರ ಪರೀಕ್ಷೆ ಬಳಿಕ ಅಂತ್ಯಸಂಸ್ಕಾರ ನಿನ್ನೆ ತೊಕ್ಕೋಟ್ ಸಮೀಪ ಮಂಚಿಲ ಎಂಬಲ್ಲಿರುವ ಸಹೋದರ ರಾಮ ಅವರ ಮನೆ ಬಳಿಯ ಸ್ಮಶಾನದಲ್ಲಿ ನಡೆಸಲಾಯಿತು ಮೃತರು ಪತ್ನಿ ಪ್ರಭಾವತಿ, ಪುತ್ರ ಶುಭಂ, ಸಹೋದರರಾದ ರಾಮ, ಸುಧಾಕರ, ಸಹೋದರಿ ಸರೋಜಿನಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ಉಳ್ಳಾಲ ಠಾಣೆಯಲ್ಲಿ ಕೇಸು ದಾಖಲು
ತಲಪಾಡಿ: ಬಂಬ್ರಾಣ ಕಲ್ಕುಳದ ಲೋಕನಾಥರ ಸಾವಿನ ಕುರಿತು ಉಳ್ಳಾಲ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಲೋಕನಾಥ್ ಸ್ನೇಹಿತರಿಗೆ ಕಳುಹಿಸಿದ ಸಂದೇಶದ ಹಿನ್ನೆಲೆಯಲ್ಲಿ ಕೇಸು ದಾಖಲಿಸಿಕೊಂಡಿರುವುದಾಗಿ ಹೇಳಲಾಗುತ್ತಿದೆ.