ನಿವೃತ್ತ ನೌಕರ ರೈಲು  ಢಿಕ್ಕಿ ಹೊಡೆದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಉದ್ದಿಮೆ ಇಲಾಖೆಯ ನಿವೃತ್ತ ನೌಕರ ರೈಲು ಢಿಕ್ಕಿ ಹೊಡೆದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಚೆರುವತ್ತೂರು ವೆಂಙಾಡ್ ನಿವಾಸಿ ಎನ್.ಕೆ. ಸುಕಮಾರನ್ (7೦) ಮೃತಪಟ್ಟ ವ್ಯಕ್ತಿ. ಚೆರುವತ್ತೂರು ರೈಲ್ವೇ ನಿಲ್ದಾಣ ಬಳಿ ಮೃತದೇಹ ಪತ್ತೆಯಾಗಿದೆ.

ಇಂದು ಮುಂಜಾನೆ  ಗೂಡ್ಸ್ ರೈಲು ಢಿಕ್ಕಿ ಹೊಡೆದು  ಸಾವು ಸಂಭವಿಸಿರಬಹು ದೆಂದು ಅಂದಾಜಿಸಲಾಗಿದೆ. ರೈಲ್ವೇ ಸ್ಟೇಶನ್ ಮಾಸ್ತರ್ ನೀಡಿದ ಮಾಹಿತಿಯಂತೆ ಪೊಲೀಸರು ತಲುಪಿ ಪರಿಶೀಲನೆ ನಡೆಸಿದಾಗ ಮೃತ ವ್ಯಕ್ತಿಯ ಗುರುತು ಪತ್ತೆಹಚ್ಚಲಾಗಿದೆ. ಘಟನೆ ಬಗ್ಗೆ ಚಂದೇರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

RELATED NEWS

You cannot copy contents of this page