ನಿವೃತ್ತ ವಿಲ್ಲೇಜ್ ಅಸಿಸ್ಟೆಂಟ್ ನಿಧನ

ಮುಳ್ಳೇರಿಯ: ಕಾರಡ್ಕ ಪುಂಡಿ ಕಾಯಿ ನಿವಾಸಿ ನಿವೃತ್ತ ವಿಲ್ಲೇಜ್ ಅಸಿಸ್ಟೆಂಟ್ ಬಟ್ಟುಂಞಿ ಶೆಟ್ಟಿ (76) ಇಂದು ಮುಂಜಾನೆ ನಿಧನಹೊಂದಿ ದರು. ಆದೂರು ವಿಲ್ಲೇಜ್ ಕಚೇರಿಯಲ್ಲಿ ಉಗ್ರಾಣಿಯಾಗಿ ಸೇವೆ ಸಲ್ಲಿಸಿದ್ದ ಇವರು ಬಳಿಕ ಭಡ್ತಿಹೊಂದಿ ವಿಲ್ಲೇಜ್ ಅಸಿಸ್ಟೆಂಟ್ ಆಗಿ ಮಧೂರು, ಕುಂಬ್ಡಾಜೆ, ವಿಲ್ಲೇಜ್ ಕಚೇರಿಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ದಿ| ಉಗ್ರಾಣಿ ರಾಮಯ್ಯ ಬಂಟ-ದಿ| ಕಲ್ಯಾಣಿ ದಂಪತಿ ಪುತ್ರನಾಗಿದ್ದಾರೆ.

ಮೃತರು ಪತ್ನಿ ಸುಂದರಿ ಬಿ. ಶೆಟ್ಟಿ, ಮಕ್ಕಳಾದ ಮನೋಜ್ ಕುಮಾರ್ ಶೆಟ್ಟಿ, ಹರೀಶ್ ಕುಮಾರ್ ಶೆಟ್ಟಿ,  ಸತೀಶ್ ಕುಮಾರ್ ಶೆಟ್ಟಿ, ಸೊಸೆಯಂದಿರಾದ ಗೀತಾ, ಲತಾ, ಸಹೋದರ ವಿಠಲ ಪಿ ಶೆಟ್ಟಿ (ನಿವೃತ್ತ ಮುಖ್ಯೋಪಾಧ್ಯಾಯ) ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಓರ್ವ ಸಹೋದರ ಸದಾಶಿವ ಶೆಟ್ಟಿ ಈ ಹಿಂದೆ ನಿಧನಹೊಂದಿದ್ದಾರೆ. ಇವರು ತನ್ನ ಮಗನಂತೆ  ಸಾಕಿ ಬೆಳೆಸಿದ್ದ ಆದೂರು ವಿಲ್ಲೇಜ್ ಕಚೇರಿಯಲ್ಲಿ ಉದ್ಯೋಗಿಯಾಗಿದ್ದ ಚಂದ್ರಶೇಖರ ಶೆಟ್ಟಿ ಕೆಲವು ವರ್ಷದ ಹಿಂದೆ ಅಪಘಾತದಲ್ಲಿ ಮೃತಪಟ್ಟಿದ್ದರು.

RELATED NEWS

You cannot copy contents of this page