ನೌಕರರ ಕೊರತೆ: ಮಂಗಲ್ಪಾಡಿ ಪಂ. ಕಚೇರಿ ಮುಂಭಾಗ ಆಡಳಿತ ಸಮಿತಿಯಿಂದ ಅನಿರ್ಧಿಷ್ಟಾವಧಿ ಮುಷ್ಕರ ಆರಂಭ

ಮಂಗಲ್ಪಾಡಿ: ಮಂಗಲ್ಪಾಡಿ ಪಂಚಾಯತ್‌ನಲ್ಲಿ ನೌಕರರ ಕೊರತೆಯಿಂದ ಸಮಸ್ಯೆ ಉಂಟಾಗಿದ್ದು, ಶೀಘ್ರ ನೌಕರರನ್ನು ನೇಮಕ ಮಾಡಬೇಕೆಂದು  ಆಗ್ರಹಿಸಿ ಐಕ್ಯರಂಗದ ಪಂ. ಸದಸ್ಯರು ಇಂದು ಬೆಳಿಗ್ಗೆ ಪಂ. ಕಚೇರಿ ಮುಂಭಾಗ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ. ಕಚೇರಿ ಮುಂಭಾಗ ಚಪ್ಪರ ನಿರ್ಮಿಸಿ   ಮುಷ್ಕರ ನಡೆಸಲಾಗುತ್ತಿದೆ.  ಪಂ. ಕಚೇರಿಗೆ ನೌಕರರ ನೇಮಕಾತಿ ಆಗುವವರೆಗೂ ಮುಷ್ಕರ ಮುಂದುವರಿಸುವುದಾಗಿ ಪಂ. ಅಧ್ಯಕ್ಷೆ ಫಾತಿಮತ್ ರುಬಿನಾ ತಿಳಿಸಿದ್ದಾರೆ. ಇದೇ ಬೇಡಿಕೆ ಮುಂದಿಟ್ಟು ಕಳೆದೆರಡು ದಿನಗಳಲ್ಲಿ ಬಿಜೆಪಿ ಹಾಗೂ ಆಡಳಿತ ಸಮಿತಿ ಸದಸ್ಯರು ಪಂ. ಕಚೇರಿ ದಿಗ್ಬಂಧನ ನಡೆಸಿದ್ದರು. ಆದರೆ ಶೀಘ್ರ ನೇಮಕ ಮಾಡುವುದಾಗಿ ಅಧಿಕಾರಿಗಳು ನೀಡಿದ ಭರವಸೆ ಈಡೇರದ ಹಿನ್ನೆಲೆಯಲ್ಲಿ ಇಂದಿನಿಂದ ಐಕ್ಯರಂಗದ ಸದಸ್ಯರು ಮುಷ್ಕರಕ್ಕೆ ಮುಂದಾಗಿದ್ದಾರೆ. ಆದರೆ ಐಕ್ಯರಂಗ ಈ ವಿಷಯದಲ್ಲಿ ರಾಜಕೀಯ ಲಾಭಕ್ಕೆ ಯತ್ನಿಸುತ್ತಿದೆ ಯೆಂದು ಬಿಜೆಪಿ ದೂರಿದೆ.

You cannot copy contents of this page