ಪತ್ನಿಯನ್ನು ಕಟ್ಟಿಗೆಯಿಂದ ಹೊಡೆದು ಕೊಲೆಗೈದ ಪ್ರಕರಣ: ತೀರ್ಪು ಇಂದು

ಕಾಸರಗೋಡು: ಪತ್ನಿಯನ್ನು ಕಟ್ಟಿಗೆ ತುಂಡಿನಿಂದ ತಲೆಗೆ ಹೊಡೆದು ಕೊಲೆಗೈದ ಪ್ರಕರಣದ ತೀರ್ಪನ್ನು ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (೧) ಇಂದು ನೀಡಲಿದೆ.

ಅಂಬಲತ್ತರ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಕಾಂಞಿರಡ್ಕ ಆಂಞಾಲಿಮೂಡು ನಿವಾಸಿ ಗೋಪಾಲಕೃಷ್ಣನ್ (೫೫)ಈ ಕೊಲೆ ಪ್ರಕರಣದ ಆರೋಪಿಯಾಗಿದ್ದಾನೆ. ೨೦೧೯ ಡಿಸೆಂಬರ್ ೨ರಂದು ಕಾಞಿ ರಡ್ಕದಲ್ಲಿ ಪತ್ನಿ ಕಲ್ಯಾಣಿಯಮ್ಮ (೫೦)ರನ್ನು ಕೊಲೆಗೈದ ಆರೋ ಪದಂತೆ ಅಂಬಲತರ ಪೊಲೀಸರು ಈ ಪ್ರಕರಣ ದಾಖಲಿಸಿಕೊಂ ಡಿದ್ದರು. ಮಾತ್ರವಲ್ಲ ತಾಯಿಯನ್ನು ಹೊಡೆಯುವುದನ್ನು ಕಂಡು ಅದನ್ನು ತಡೆಯಲು ಹೋದ ಪುತ್ರಿಗೂ ಹೊಡೆದು ಆರೋಪಿ ಗಾಯಗೊ ಳಿಸಿರುವುದಾಗಿಯೂ ಪೊಲೀಸ್ ಕೇಸಿನಲ್ಲಿ ಹೇಳಲಾಗಿದೆ. ಅಂದು ಅಂಬಲತರ ಪೊಲೀಸ್ ಠಾಣೆ ಎಸ್‌ಐ ಆಗಿದ್ದ ಕೆ. ಪ್ರಶಾಂತ್ ಕುಮಾರ್ ಅವರು ಈ ಪ್ರಕರಣದ ಬಗ್ಗೆ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

You cannot copy contents of this page