ಪೈವಳಿಕೆ ತ್ಯಾಜ್ಯ ಸಮಸ್ಯೆ ಡಿಫಿಯಿಂದ ಪಂಚಾಯತ್ ಮಾರ್ಚ್

ಪೈವಳಿಕೆ: ಅವೈಜ್ಞಾನಿಕ ತ್ಯಾಜ್ಯ ವಿಲೇವಾರಿ ರೀತಿ ಕೈಬಿಡಬೇಕೆಂದು ಆಗ್ರಹಿಸಿ ಡಿವೈಎಫ್‌ಐ ಪೈವಳಿಕೆ ಪಂಚಾಯತ್ ಕಚೇರಿಗೆ ಮಾರ್ಚ್ ನಡೆಸಿತು.  ವಿಲೇವಾರಿ ಕೇಂದ್ರದಲ್ಲಿ ರಾಶಿ ಬಿದ್ದಿರುವ ತ್ಯಾಜ್ಯ ತೆರವುಗೊಳಿಸಬೇಕು ಮೊದಲಾದ ಬೇಡಿಕೆ ಮುಂದಿಟ್ಟು ಡಿಫಿ ಮಂಜೇಶ್ವರ ಬ್ಲೋಕ್ ಸಮಿತಿ ಪಂಚಾಯತ್‌ಗೆ ಪ್ರತಿಭಟನೆ ನಡೆಸಿದೆ. ಕಾಸರಗೋಡು ಜಿಲ್ಲಾಧ್ಯಕ್ಷ ಎಂ.ವಿ. ರತೀಶ್ ಉದ್ಘಾಟಿಸಿದರು. ಉದಯ ಸಿ.ಎಚ್. ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಜೊತೆ ಕಾರ್ಯದರ್ಶಿ ಸಾದಿಕ್ ಚೆರುಗೋಳಿ, ಅಬ್ದುಲ್ ರಜಾಕ್ ಚಿಪ್ಪಾರ್, ಸಾಬಿರ್ ಉಪ್ಪಳ, ಹಾರಿಸ್ ಪೈವಳಿಕೆ, ಮಹೇಶ್ ಕುಮಾರ್, ಅಬ್ದುಲ್ ಆಸೀಫ್, ಝಕರಿಯ ಬಾಯಾರು ಮಾತನಾಡಿ ದರು. ವಿನಯ ಕುಮಾರ್ ಸ್ವಾಗತಿಸಿದರು.
 

RELATED NEWS

You cannot copy contents of this page