ಉಪ್ಪಳ: ಮಂಗಲ್ಪಾಡಿ ತಿಂಬರ ನಿವಾಸಿ ನವಿ ಮುಂಬಯಿ ಬೇಲಾಪುರ್‌ನಲ್ಲಿ ವಾಸವಾಗಿರುವ ಹಿರಿಯ ಹೋಟೆಲ್ ಉದ್ಯಮಿ, ದಾನಿ ಸಂಜೀವ ಶೆಟ್ಟಿ ತಿಂಬರ ರವರ ಪತ್ನಿ ಜಯಂತಿ ಶೆಟ್ಟಿ (63) ನಿನ್ನೆ ಮುಂಜಾನೆ ಮುಂಬಯಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ಪತಿ, ಮಕ್ಕಳಾದ ಅರುಣ್ ಶೆಟ್ಟಿ, ಅಜಿತ್ ಶೆಟ್ಟಿ, ಅಶ್ವಿಥ್ ಶೆಟ್ಟಿ, ಸೊಸೆಯಂದಿರಾದ ಕಲ್ಪಿತ, ಶಮಿತ, ಸೌಮ್ಯ, ಸಹೋದರ ರಮೇಶ ಆಳ್ವ ತಿಂಬರ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.






