13ರ ಬಾಲಕನಿಗೆ  ಹಲ್ಲೆ: ಹಲವು ಪೋಕ್ಸೋ ಪ್ರಕರಣಗಳಲ್ಲಿ ಆರೋಪಿಯಾದ ಉಸ್ತಾದ್ ವಿರುದ್ಧ ಇನ್ನೊಂದು ಕೇಸು

ಕಾಸರಗೋಡು: 15ಕ್ಕೂ ಅಧಿಕ ಪೋಕ್ಸೋ ಪ್ರಕರಣಗಳಲ್ಲಿ ಆರೋಪಿಯಾದ ಮಲಪ್ಪುರಂ, ವಳಾಂಜೇರಿ ಆದವನಾಡ್ ಉಸ್ತಾದ್ ವಿರುದ್ಧ ಬೇಕಲ ಪೊಲೀಸರು ಇನ್ನೊಂದು ಕೇಸು ದಾಖಲಿಸಿದ್ದಾರೆ. 13ರ ಹರೆಯದ ಬಾಲಕನನ್ನು ಹಲವು ದಿನಗಳ ಕಾಲ ದೊಣ್ಣೆಯಿಂದ ಹೊಡೆದು ಗಾಯಗೊಳಿಸಿದನೆಂಬ ದೂರಿನಂತೆ ಎಂ.ಕೆ. ಮೊಹಮ್ಮದ್ ಉಸ್ತಾದ್ ವಿರುದ್ಧ ಕೇಸು ದಾಖಲಿಸಲಾಗಿದೆ. ಇದರೊಂದಿಗೆ ಬೇಕಲ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧವಿರುವ ಪ್ರಕರಣಗಳ ಸಂಖ್ಯೆ ಮೂರು ಆಗಿ ಹೆಚ್ಚಳಗೊಂಡಿದೆ. ಈ ಮೊದಲು ಎರಡು ಪೋಕ್ಸೋ ಕೇಸುಗಳನ್ನೂ ಈತನ ವಿರುದ್ಧ ನೋಂದಾಯಿಸಲಾಗಿತ್ತು. ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯ ಧಾರ್ಮಿಕ ಅಧ್ಯಯನ ಕೇಂದ್ರವೊಂದರ ಎರಡು ಗಂಡು ಮಕ್ಕಳನ್ನು ಸಲಿಂಗರತಿ ದೌರ್ಜನ್ಯಗೊಳಿಸಿರುವುದಕ್ಕೆ ಈ ಮೊದಲು ಕೇಸು ದಾಖಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ತಲೆಮರೆಸಿಕೊಂಡಿದ್ದ ಈತ ಕೆಲವು ದಿನಗಳ ಹಿಂದೆ ಬಿಹಾರಿನ ಅಡಗುದಾಣದಿಂದ ಮಲಪ್ಪುರಂ ವಳಾಂಜೇರಿ ಪೊಲೀಸರು ಬಂಧಿಸಿದ್ದರು. ಆರೋಪಿ ವಿರುದ್ಧ ವಳಾಂಜೇರಿಯಲ್ಲಿ ೧೪ಕ್ಕೂ ಅಧಿಕ ಪೋಕ್ಸೋ ಪ್ರಕರಣಗಳಿವೆ. ಈ ಕೇಸುಗಳಲ್ಲಿ ಈತನ ಸೆರೆಯಾಗಿದೆ.

ಬೇಕಲದಲ್ಲಿ ನೋಂದಾಯಿಸಿದ  ಪೋಕ್ಸೋ ಕೇಸುಗಳಲ್ಲಿ ಈತನನ್ನು ಕಸ್ಟಡಿಗೆ ಪಡೆಯಲಿರುವ ಸಿದ್ಧತೆಗಳ ಮಧ್ಯೆ ಕ್ರೂರವಾದ ಹಲ್ಲೆ ನಡೆಸಿರುವುದಾಗಿ ೧೩ರ ಹರೆಯದ ಬಾಲಕ ಪೊಲೀಸರಿಗೆ ದೂರು ನೀಡಿದ್ದಾನೆ.

RELATED NEWS

You cannot copy contents of this page