ಪಾಂಡಿ ಶಾಲೆಯಲ್ಲಿ ಉತ್ಸವ ಮಿಠಾಯಿ ೧೯, ೨೦ರಂದು
ಅಡೂರು: ಪಾಂಡಿ ಜಿಎಚ್‌ಎಸ್‌ಎಸ್‌ನ ಶಾಲಾ ಕಲೋತ್ಸವದಂಗವಾಗಿ ಉತ್ಸವ ಮಿಠಾಯಿ ಕಾರ್ಯಕ್ರಮ ಅ. ೧೯, ೨೦ರಂದು ನಡೆಯಲಿದೆ.
೧೯ರಂದು ಬೆಳಿಗ್ಗೆ ೧೧ಕ್ಕೆ ಎಸ್‌ಎಸ್‌ಕೆ ಕಾಸರಗೋಡು ಇದರ ಡಿಪಿಸಿ ನಾರಾಯಣ ಡಿ. ಉದ್ಘಾಟಿಸುವರು. ಶಾಲಾ ಪಿಟಿಎ ಅಧ್ಯಕ್ಷ ದಿವಾಕರ ಬಿ. ಅಧ್ಯಕ್ಷತೆ ವಹಿಸುವರು. ಪಂಚಾಯತ್ ಸದಸ್ಯ ಟಿ.ಕೆ. ದಾಮೋದರನ್ ಮುಖ್ಯ ಅತಿಥಿಯಾಗಿರುವರು. ಉಸ್ತುವಾರಿ ಪ್ರಾಂಶುಪಾಲ ರಾಜೇಶ್ ನೋಯೆಲ್, ಮುಖ್ಯೋಪಾಧ್ಯಾಯ ರಾಧಾಕೃಷ್ಣ ಎಂ, ಎಸ್‌ಎಂಸಿ ಚೆಯರ್‌ಮೆನ್ ರಾಜೇಂದ್ರನ್ ಇ, ಎಂಪಿಟಿಎ ಅಧ್ಯಕ್ಷೆ ನವೀನ, ಎಚ್‌ಎಸ್‌ಎಸ್ ಸೀನಿಯರ್ ಅಸಿಸ್ಟೆಂಟ್ ಅನಿಲ್ ಕೆ.ಇ, ಎಚ್.ಎಸ್. ಸೀನಿಯರ್ ಅಸಿಸ್ಟೆಂಟ್ ರೇಖಾಸ್ಮಿತ ಎ. ಮೊದಲಾದವರು ಉಪಸ್ಥಿತರಿರುವರು. ಸ್ಪರ್ಧೆಗಳು ಬೆಳಿಗ್ಗೆ ೯ಕ್ಕೆ ಆರಂಭಗೊಳ್ಳಲಿದೆ.