ಪುಟ್ಟ ಮಗು ಎದೆ ಹಾಲು ಗಂಟಲಲ್ಲಿ ಸಿಲುಕಿ ಸಾವು

ಕುಂಬಳೆ: ಎದೆಹಾಲು ಗಂಟಲಲ್ಲಿ ಸಿಲುಕಿ 49 ದಿನ ಪ್ರಾಯದ ಮಗು ಮೃತಪಟ್ಟ ದಾರುಣ ಘಟನೆ ನಡೆದಿದೆ.

ಹೇರೂರು ವೆಂಕುಮೂಲೆ ನಿವಾಸಿ ನೌಶಾದ್-ರಾಹಿಲ ದಂಪತಿಯ ಪುತ್ರಿ ಸಫೀಯತ್ ನೈಫ್ ಮೃತಪಟ್ಟ ಮಗುವಾಗಿದೆ. ಇಂದು ಮುಂಜಾನೆ 4 ಗಂಟೆಗೆ ಹಾಲುಣಿಸಿ ಮಗುವನ್ನು ಮಲಗಿಸಲಾಗಿತ್ತು. ಬೆಳಿಗ್ಗೆ ಮಗು ಎಚ್ಚರಗೊಂಡಿರಲಿಲ್ಲವೆನ್ನ ಲಾಗಿದೆ. ಇದರಿಂದ ಕೂಡಲೇ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ಮಗುವನ್ನು ಕರೆದೊಯ್ಯಿದ್ದು, ಆದರೆ ಅಷ್ಟರೊಳಗೆ ಮಗು ಮೃತಪಟ್ಟಿತ್ತೆನ್ನ ಲಾಗಿದೆ. ಹಾಲು ಗಂಟಲಲ್ಲಿ ಸಿಲುಕಿ ಮಗು ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿರುವುದಾಗಿ ಮನೆಯವರು ತಿಳಿಸಿದ್ದಾರೆ. ಮೃತ ಮಗು ತಂದೆ, ತಾಯಿ ಹೊರತು ಸಹೋದರ ಮೊಹಮ್ಮದ್ ರಸಾನ್ ಎಂಬವರನ್ನು ಅಗಲಿದೆ.

Leave a Reply

Your email address will not be published. Required fields are marked *

You cannot copy content of this page