ಪೂಚಕ್ಕಾಡ್‌ನಲ್ಲಿ ಮುಂಜಾನೆ ಅಪಘಾತ : ಸ್ಕೂಟರ್ ಸವಾರ ವಿದ್ಯಾರ್ಥಿ ಮೃತ್ಯು

ಕಾಸರಗೋಡು: ಪಳ್ಳಿಕ್ಕರೆ ಪೂಚಕ್ಕಾಡ್‌ನಲ್ಲಿ ಸ್ಕೂಟರ್‌ಗೆ ಲಾರಿ ಢಿಕ್ಕಿ ಹೊಡೆದು ವಿದ್ಯಾರ್ಥಿ ಮೃತಪಟ್ಟನು. ಚೆರ್ವತ್ತೂರು ಕಾಡಂಗೋಡು ನಿವಾಸಿ ಎ.ಪಿ. ಮುಹಮ್ಮದ್ ಫಾಯಿಸ್ (23) ಮೃತಪಟ್ಟ ವಿದ್ಯಾರ್ಥಿಯಾಗಿದ್ದಾನೆ. ಜೊತೆಗೆ ಸಂಚರಿಸಿದ್ದ ಸಹಪಾಠಿ ಚಿತ್ತಾರಿ ಪೆಟ್ರೋಲ್‌ಬಂಕ್ ಸಮೀಪದ ರಯೀಸ್ ಗಾಯ ಗೊಂಡಿದ್ದಾನೆ. ಇಂದು ಮುಂಜಾನೆ ಮೂರೂವರೆ ಗಂಟೆಗೆ ಘಟನೆ ನಡೆದಿದೆ. ಮಂಗಳೂರಿನಿಂದ ಸ್ಕೂಟರ್‌ನಲ್ಲಿ ಫಾಯೀಸ್ ಮನೆಗೆ ಹಿಂತಿರುಗುತ್ತಿದ್ದನು. ಸ್ಕೂಟರ್‌ಗೆ ಲಾರಿ ಢಿಕ್ಕಿಯಾದಾಗ ಎದುರು ಭಾಗದಿಂದ ಬರುತ್ತಿದ್ದ ಇನ್ನೊಂದು ಲಾರಿಯಡಿಗೆ ಫಾಯಿಸ್ ಬಿದ್ದಿದ್ದಾನೆ. ಕೂಡಲೇ ಕಾಞಂಗಾಡ್‌ನ ಆಸ್ಪತ್ರೆಗೆ ತಲುಪಿಸಿದರೂ ಆ ವೇಳೆ ಮೃತಪಟ್ಟಿದ್ದನು. ಲಾರಿ ಚಾಲಕನನ್ನು ಪೊಲೀಸರು ಕಸ್ಟಡಿಗೆ ತೆಗೆದಿದ್ದಾರೆ.

RELATED NEWS

You cannot copy contents of this page