ನಿಯಂತ್ರಣ ತಪ್ಪಿ ಕಾರು ಟೈಲರ್ ಅಂಗಡಿಗೆ ಢಿಕ್ಕಿ: ಅಪಾಯದಿಂದ ಪಾರು

ಮಂಜೇಶ್ವರ: ಕಟ್ಟೆಬಜಾರ್ ತಿರುವಿನಲ್ಲಿ ಕಾರು ನಿಯಂತ್ರಣ ತಪ್ಪಿ ಹಳೆಯ ಕಟ್ಟಡದಲ್ಲಿ ಕಾರ್ಯಾಚರಿಸುತಿದ್ದ ಟೈಲರ್ ಅಂಗಡಿಗೆ ಹಾಗೂ ಸ್ಕೂಟರ್‌ಗೆ ಡಿಕ್ಕಿ ಹೊಡೆದು ಇಬ್ಬರು ಅದೃಷ್ಟವಶಾತ್ ಅಪಾಯದಿಂದ ಪಾರಾದ ಘಟನೆ ನಡೆದಿದೆ. ಶನಿವಾರ ಮಧ್ಯಾಹ್ನ ಹೊಸಂಗಡಿಯಿAದ ಬಂಗ್ರಮAಜೇಶ್ವರ ದಾರಿಯಾಗಿ ತೆರಳುತ್ತಿದ್ದ ಕಾರು ಕಟ್ಟೆ ಬಜಾರ್ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪರಿಸರದಲ್ಲಿ ಕಾರ್ಯಚರಿಸುತ್ತಿದ್ದ ಕಡಂಬಾರ್ ನಿವಾಸಿ ಫೆಲಿಕ್ಸ್ ಡಿಸೋಜಾರ ಅಂಗಡಿಯ ಗೋಡೆಗೆ ಡಿಕ್ಕಿ ಹೊಡೆದಿದೆ. ಇದೇ ವೇಳೆ ಅಂಗಡಿ ಬಳಿಯಲ್ಲಿ ನಿಲ್ಲಿಸಿದ್ದ ಸ್ಕೂಟರ್‌ಗೂ ಡಿಕ್ಕಿಹೊಡೆದಿದೆ. ಇದರಿಂದ ಅಂಗಡಿ, ಸ್ಕೂಟರ್, ಕಾರು ಹಾನಿ ಹಾನಿಗೊಂಡಿದೆ. ಅಂಗಡಿ ಮಾಲಕ ಹಾಗೂ ಅವರ ಬಳಿ ಮಾತನಾಡುತಿದ್ದ ಸ್ಕೂಟರ್ ಸವಾರ, ಕಾರು ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಕಾರಿನೊಳಗೆ ಇಲಿ ಚಾಲಕನ ಕಾಲಿನಡಿಗೆ ಬಂದಿರುವುದೇ ಚಾಲಕ ನಿಯಂತ್ರಣ ತಪ್ಪಲು ಕಾರಣವೆಂದು ತಿಳಿದು ಬಂದಿದೆ.

You cannot copy contents of this page