ಬೇಳದಿಂದ ಬೈಕ್ ಕಳವು ನಡೆಸಿದ ಇಬ್ಬರು ಆರೋಪಿಗಳ ಬಂಧನ

ನೀರ್ಚಾಲು: ಬೇಳ ಚಿಮಿಣಿಯಡ್ಕದಲ್ಲಿ ಮನೆ ಸಮೀಪ ನಿಲ್ಲಿಸಿದ್ದ ಬೈಕ್ ಕಳವುಗೈದ ಪ್ರಕರಣದಲ್ಲಿ ಇಬ್ಬರು ಆರೋಪಿಗ ಳನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಮಧೂರು ಪಟ್ಲ ಕೊಲ್ಯ ನಿವಾಸಿ ಗಣೇಶ್ ಯಾನೆ ಅಪ್ಪು, ಪೆರಿಯಡ್ಕ ಮನ್ಸೂರ್ ಹೌಸ್‌ನ ಮನ್ಸೂರ್ ಎಂಬಿವರನ್ನು ಇನ್‌ಸ್ಪೆಕ್ಟರ್ ಆರ್.ಪಿ. ಅನೂಪ್‌ಕೃಷ್ಣರ ನೇತೃತ್ವ ದಲ್ಲಿರುವ ಪೊಲೀಸ್ ತಂಡ ಬಂಧಿಸಿದೆ. ಈತಿಂಗಳ ೮ರಂದು ರಾತ್ರಿ ಚಿಮಿಣಿಯಡ್ಕದ ಸಿ.ಎಚ್. ಪ್ರಣಯ್ ಎಂಬವರ ತಂದೆಯ ಮಾಲಕತ್ವದ ಲ್ಲಿರುವ ಬೈಕ್ ಕಳವಿಗೀಡಾಗಿತ್ತು. ಮನೆಯ ಹಿತ್ತಿಲಲ್ಲಿ ನಿಲ್ಲಿಸಿದ್ದ ಬೈಕ್‌ನ್ನು  ಆರೋಪಿಗಳು ಕಳವು ನಡೆಸಿದ್ದರು. ಈ ಬಗ್ಗೆ  ಲಭಿಸಿದ ದೂರಿನಂತೆ ಕೇಸು ದಾಖಲಿಸಿಕೊಂಡ ಬದಿಯಡ್ಕ  ಪೊಲೀಸರು  ಹಲವು ಸಿ.ಸಿ ಟಿವಿ ಕ್ಯಾಮರಾಗಳ ದೃಶ್ಯಗಳನ್ನು ಸಂಗ್ರಹಿಸಿ   ತನಿಖೆ ನಡೆಸಿದ್ದರು. ಆರೋಪಿಗಳ ಬಗ್ಗೆ ಖಚಿತ ಮಾಹಿತಿ ಲಭಿಸಿದ  ಪೊಲೀಸರು  ನಿನ್ನೆ ಮಧ್ಯಾಹ್ನ ಚೌಕಿಯಿಂದ ಆರೋಪಿಗಳನ್ನು ಬಂಧಿಸಿದ್ದಾರೆ.

You cannot copy contents of this page