ಪೆರ್ಮುದೆ ಇಗರ್ಜಿಗೆ ಬಿಷಪ್ ಭೇಟಿ

ಪೆರ್ಮುದೆ : ಲಾರೆನ್ಸ್ ನಗರದ ಸೈಂಟ್ ಲಾರೆನ್ಸ್ ದಿ ಮಾರ್ಟಿರ್ ಇಗ ರ್ಜಿಗೆ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ. ಪೀಟರ್ ಪಾವ್ಲ್ ಸಲ್ದಾನಾ ಭೇಟಿ ನೀಡಿದರು.
ನಿನ್ನೆ ಬೆಳಿಗ್ಗೆ ಇಗರ್ಜಿ ದ್ವಾರದ ಬಳಿ ಧರ್ಮಾಧ್ಯಕ್ಷರನ್ನು ಸ್ವಾಗತಿಸ ಲಾಯಿತು. ಇಗರ್ಜಿಯ ಧರ್ಮಗುರು ವಂ. ಫಾ. ಹೆರಾಲ್ಡ್ ಡಿಸೋಜ, ಸಹಾಯಕ ಧರ್ಮಗುರು ವಂ. ಫಾ. ಕ್ಲೋಡ್ ಕೋರ್ಡಾ, ಪಾಲನ ಸಮಿತಿ ಉಪಾಧ್ಯಕ್ಷೆ ಡೋರಿನ್ ಪಿರೇರಾ, ಕಾರ್ಯದರ್ಶಿ ಲ್ಯಾನ್ಸಿ ಡಿಸೋಜ ಉಪಸ್ಥಿತರಿದ್ದರು. ಬಿಷಪ್ ಅವರಿಂದ ವಿಶೇಷ ಪ್ರಾರ್ಥನೆ, ಪ್ರವಚನ ನಡೆ ಯಿತು. ಬಳಿಕ ನಡೆದ ದಿವ್ಯಬಲಿ ಪೂಜೆಯನ್ನು ಅತಿ ವಂದನೀಯ ಪೀಟರ್ ಪಾವ್ಲ್ ಸಲ್ದಾನಾ ನೆರವೇ ರಿಸಿದರು. ಫಾ. ಹೆರಾಲ್ಡ್ ಡಿಸೋಜ, ಫಾ. ಕ್ಲೋಡ್ ಕೋರ್ಡಾ, ಬಿಷಪ್ ಅವರ ಕಾರ್ಯದರ್ಶಿ ವಂ. ಫಾ. ತ್ರಿಶನ್ ಡಿಸೋಜ ಉಪಸ್ಥಿತರಿದ್ದರು. ದಿವ್ಯಬಲಿಪೂಜೆಯ ನಂತರ ವಿಶೇಷ ಪ್ರಾರ್ಥನೆ ನಡೆಯಿತು.

RELATED NEWS

You cannot copy contents of this page