ಪೊಸೋಟು ಪೆಟ್ರೋಲ್ ಬಂಕ್‌ನಿಂದ ಮತ್ತೆ ಕಳವು ಯತ್ನ: ಶಟರ್ ಮುರಿದ ಸ್ಥಿತಿಯಲ್ಲಿ
ಮಂಜೇಶ್ವರ: ಪೊಸೋಟು ಪೆಟ್ರೋಲ್ ಬಂಕ್‌ನಲ್ಲಿ ಮತ್ತೆ ಕಳವು ನಡೆದಿದೆ. ಪೆಟ್ರೋಲ್ ಬಂಕ್‌ನ ಕಚೇರಿಯ ಶಟರ್ ಕಬ್ಬಿಣದ ಸಲಾಕೆ ಉಪಯೋಗಿಸಿ ಬಗ್ಗಿಸಿದ ಬಳಿಕ ಆ ರಂದ್ರದ ಮೂಲಕ ಒಳಗೆ ನುಗ್ಗಿದ ಕಳ್ಳ ಮೇಜಿನ ಡ್ರಾವರ್ ತೆರೆದಿದ್ದಾನೆ. ಆದರೆ ಇದರಲ್ಲಿದ್ದ ಸುಮಾರು ೨ ಸಾವಿರ ರೂ. ನಾಣ್ಯವನ್ನು ಕಳವುಗೈದಿಲ್ಲ. ಕೀಲಿ ಕೈ ಬಿಸಾಡಿದ ಸ್ಥಿತಿಯಲ್ಲಿದೆ. ಲಾಕರ್ ಕೆಡವಲು ಯತ್ನಿಸಿದ ಗುರುತು ಕಂಡು ಬಂದಿದ್ದು, ತೆರೆಯಲು ಸಾಧ್ಯವಾಗಿಲ್ಲ.ಇದು ಪಳ್ಳಿಕ್ಕೆರೆ ನಿವಾಸಿ ಹನೀಫ್‌ರ ಮಾಲಕತ್ವದ ಪೆಟ್ರೋಲ್ ಬಂಕ್ ಆಗಿದೆ. ರಾತ್ರಿ ೮.೩೦ಕ್ಕೆ ಮುಚ್ಚುವ ಬಂಕ್ ಬೆಳಿಗ್ಗೆ ತೆರೆಯಲು ಕೆಲಸದವರು ತಲುಪಿದಾಗ ಕಳವು ಯತ್ನ ಗಮನಕ್ಕೆ ಬಂದಿದೆ. ಮಂಜೇಶ್ವರ ಠಾಣೆಗೆ ದೂರು ನೀಡಲಾಗಿದೆ. ೫ ತಿಂಗಳ ಹಿಂದೆ ಇದೇ ಪೆಟ್ರೋಲ್ ಬಂಕ್‌ನಿಂದ ಕಳವು ನಡೆಸಲಾಗಿತ್ತು.