ಕುರುಡಪದವು: ಜ್ವರ ಉಲ್ಬಣಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬೇಕರಿ ನೌಕರ ಮೃತಪಟ್ಟ ಘಟನೆ ನಡೆದಿದೆ. ಕುರುಡಪದವು ಬಳಿಯ ಬಂಡಿಮಾರ್ ಕುರಿಯ ನಿವಾಸಿ ದಿ| ರಾಮಣ್ಣ ಭಂಡಾರಿಯವರ ಪುತ್ರ ಮನೋಜ್ ಕುಮಾರ್ (43) ಮೃತಪಟ್ಟವರು. ಇವರು ಮಂಗಳೂರಿನ ಬಿ.ಸಿ ರೋಡ್ನಲ್ಲಿ ಸಹೋದರ ಪ್ರಶಾಂತ್ರ ಬೇಕರಿಯಲ್ಲಿ ದುಡಿಯುತ್ತಿದ್ದರು. ಹಲವು ದಿನಗಳ ಹಿಂದೆ ಜ್ವರ ತಗಲಿ ಚಿಕಿತ್ಸೆ ಪಡೆದಿದ್ದರು. ಮಂಗಳವಾರ ಉಲ್ಬಣಗೊಂಡಿದ್ದು, ದೇರಳಕಟ್ಟೆ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಪಡೆ ದಿದ್ದರು. ನಿನ್ನೆ ಸಂಜೆ ಮೃತಪಟ್ಟಿದ್ದಾರೆ. ಕುರುಡಪದವು ಶ್ರೀರಾಮ್ ಫ್ರೆಂಡ್ಸ್ ಕ್ಲಬ್, ಶ್ರೀರಾಮ ಭಜನಾ ಮಂದಿರ ಹಾಗೂ ಶ್ರೀ ಅಯ್ಯಪ್ಪ ಮಂದಿರದ ಸಕ್ರಿಯ ಕಾರ್ಯಕರ್ತರಾಗಿದ್ದರು. ಮೃತರು ತಾಯಿ ಕಮಲ ಭಂಡಾರಿ, ಪತ್ನಿ ರಮ್ಯ, ಮಕ್ಕಳಾದ ಆದಿತ್ಯ, ಮೇದಸ್ವಿ, ಸಹೋದರರಾದ ಹರುಷ ಕುಮಾರ್, ಪ್ರಶಾಂತ್, ಚರಣ್ರಾಜ್ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಅಂತ್ಯಸAಸ್ಕಾರ ಮನೆ ಪರಿಸರದಲ್ಲಿ ನಡೆಯಿತು. ನಿಧನಕ್ಕೆ ಶ್ರೀರಾಮ್ ಫ್ರೆಂಡ್ಸ್ ಕ್ಲಬ್, ಶ್ರೀರಾಮ ಭಜನಾ ಮಂದಿರ ಮತ್ತು ಶ್ರೀ ಅಯ್ಯಪ ಮಂದಿರ ಕುರುಡಪದವು ಸಂತಾಪ ಸೂಚಿಸಿದೆ.






