ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ: ಮುಖ್ಯ ಆರೋಪಿ ಕಣ್ಣೂರು ವಿಮಾನ ನಿಲ್ದಾಣದಲ್ಲಿ ಸೆರೆ
ಕಾಸರಗೋಡು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆ ನಿವಾಸಿ ಬಿಜೆಪಿ ಯುವಮೋರ್ಛಾ ನೇತಾರ ಪ್ರವೀಣ್ ನೆಟ್ಟಾರು ಅವರನ್ನು ಕೊಲೆಗೈದ ಪ್ರಕರಣದ ಮುಖ್ಯ ಆರೋಪಿ ಕಣ್ಣೂರು ವಿಮಾನ ನಿಲ್ದಾಣದಲ್ಲಿ ಸೆರೆಗೀಡಾಗಿದ್ದಾನೆ. ಪೋಪುಲರ್ ಫ್ರಂಟ್ ಆಫ್ ಇಂ ಡಿಯಾ (ಪಿಎಫ್ಐ) ಕಾರ್ಯ ಕರ್ತ ಅಬ್ದುಲ್ ರಹ್ಮಾನ್ ಎಂಬಾತನನ್ನು ಎನ್ಐಎ ಸೆರೆ ಹಿಡಿದಿದೆ. ನಿನ್ನೆ ಸಂಜೆ 3.10ಕ್ಕೆ ದೋಹಾದಿಂದ ಬಂದ ವಿಮಾನದಲ್ಲಿ ಈತ ಕಣ್ಣೂರಿಗೆ ತಲುಪಿದ್ದನು. ಈ ವೇಳೆ ಈತನನ್ನು ಬಂಧಿಸಲಾಗಿದೆ. ಎರಡು ವರ್ಷಗಳಿಂದ ಈತ ಖತ್ತರ್ನಲ್ಲಿ ತಲೆಮರೆಸಿಕೊಂಡಿದ್ದನು. ಅಬ್ದುಲ್ ರಹ್ಮಾನ್ ಸಹಿತ ಪ್ರಕರಣಕ್ಕೆ ಸಂಬಂಧಿಸಿ ಸೆರೆಗೀಡಾದ ಆರು ಮಂದಿಯ ಕುರಿತು ಮಾಹಿತಿ ನೀಡುವರಿಗೆ ಎನ್ಐಎ ನಾಲ್ಕು ಲಕ್ಷ ರೂ. ಪಾರಿತೋಷಕ ಘೋಷಿಸಿತ್ತು. ಪಿಎಫ್ಐ ನೇತೃತ್ವದ ನಿರ್ದೇಶ ಪ್ರಕಾರ ಪ್ರಕರಣದ ಆರೋಪಿಗಳಿಗೆ ಈತ ಅಡಗುತಾಣ ಒದಗಿಸಿರುವು ದಾಗಿ ತನಿಖೆಯಲ್ಲಿ ಪತ್ತೆಹಚ್ಚಲಾಗಿದೆ ಯೆಂದು ಎನ್ಐಎ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇತರ ಆರೋಪಿಗಳನ್ನು ಬಂಧಿಸಿದ ಬೆನ್ನಲ್ಲೇ ಅಬ್ದುಲ್ ರಹ್ಮಾನ್ ಖತ್ತರ್ಗೆ ಪರಾರಿಯಾಗಿದ್ದನು. ಕಳೆದ ಎಪ್ರಿಲ್ನಲ್ಲಿ ಅಬ್ದುಲ್ ರಹ್ಮಾನ್ ಹಾಗೂ ತಲೆಮರೆಸಿಕೊಂಡ ಇಬ್ಬರು ಆರೋಪಿಗಳ ಸಹಿತ ನಾಲ್ಕು ಮಂದಿಯನ್ನು ಎನ್ಐಎ ಆರೋಪ ಪಟ್ಟಿಯಲ್ಲಿ ಸೇರಿಸಿತ್ತು. ಇದರಿಂದ ಪ್ರಕರಣದಲ್ಲಿ ಆರೋಪಿಗಳ ಸಂಖ್ಯೆ 28ಕ್ಕೇರಿತ್ತು. 2022 ಜುಲೈ 26ರಂದು ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರ್ರನ್ನು ತಂಡವೊಂದು ಬರ್ಭರವಾಗಿ ಕೊಲೆಗೈದಿತ್ತು. ಬೆಳ್ಳಾರೆಯಲ್ಲಿ ಕೋಳಿ ಅಂಗಡಿ ನಡೆಸುತ್ತಿದ್ದ ಪ್ರವೀಣ್ ನೆಟ್ಟಾರು ಕೆಲಸ ಮುಗಿಸಿ ಮನೆಗೆ ಮರಳಲು ಸಿದ್ಧತೆ ನಡೆಸುತ್ತಿದ್ದ ವೇಳೆ ಬೈಕ್ನಲ್ಲಿ ತಲುಪಿದ ತಂಡ ಮಾರಕಾಯುಧ ಗಳಿಂದ ಆಕ್ರಮಿಸಿ ಕೊಲೆಗೈದಿತ್ತು.