ಪ್ಲಸ್ ವನ್: ಜೂನ್ 18ರಿಂದ ತರಗತಿ ಆರಂಭ
ಕಾಸರಗೋಡು: ಸರಕಾರಿ ಹಾಗೂ ಅನುದಾನಿತ (ಐಡೆಡ್) ಶಾಲೆಗಳಲ್ಲಿ ಪ್ಲಸ್ ವನ್ ತರಗತಿ ಪ್ರವೇಶಕ್ಕಾಗಿರುವ ಅರ್ಜಿಗಳನ್ನು ಇಂದಿನಿಂದ ಏಕಕಿಂಡಿ ವ್ಯವಸ್ಥೆಯಡಿ ಆನ್‌ಲೈನ್ ಮೂಲಕ ಸಲ್ಲಿಸಬಹುದಾಗಿದೆ. ಅರ್ಜಿ ಸ್ವೀಕರಿಸುವ ಕೊನೆಯ ದಿನಾಂಕ ಮೇ 20 ಆಗಿದೆ. ಹೀಗೆ ಸಲ್ಲಿಸಲಾಗುವ ಅರ್ಜಿಗಳನ್ನು ಪರಿಶೀಲಿಸಿ ಅದರ ಆಧಾರದಲ್ಲಿ ಮೂರು ಹಂತಗಳಲ್ಲಾಗಿ ಅಲೋಟ್‌ಮೆಂಟ್ ನಂತೆ ಪ್ರವೇಶ ಕ್ರಮಗಳನ್ನು ಪೂರ್ತೀಕರಿಸಿ ಜೂನ್ 18ರಿಂದ ಪ್ಲಸ್‌ವನ್ ತರಗತಿ ಆರಂಭಗೊಳ್ಳಲಿದೆ. ಈ ಪ್ರಕ್ರಿಯೆ ಬಳಿಕ ಸಪ್ಲಿಮೆಂಟ್ ಅಲೋಟ್‌ಮೆಂಟ್‌ಗಳನ್ನು ನಡೆಸಿ ಜೂನ್ 23ರಂದು ಪ್ರವೇಶಾತಿ ಕ್ರಮಗಳನ್ನು ಪೂರ್ತೀಕರಿಸಲಾಗುವುದು.
ಇದರ ಜೊತೆಗೆ ಪರಿಶಿಷ್ಟ ಜಾತಿ ಅಭಿವೃದ್ಧಿ ಇಲಾಖೆಯ ಆಶ್ರಯದಲ್ಲಿ ಕಾರ್ಯವೆಸಗುತ್ತಿರುವ ಆರು ಮೋಡಲ್ ರೆಸಿಡೆನ್ಸಿ ಶಾಲೆಗಳ ಪ್ರವೇಶ ಕ್ರಮವನ್ನೂ ಆನ್‌ಲೈನ್ ಮೂಲಕ ಅರ್ಜಿ ಸ್ವೀಕರಿಸಿ ಪೂರ್ತೀಕರಿಸಲಾಗುವುದು. ಇನ್ನು ಅನುದಾನಿತ ಶಾಲೆಗಳ ಮೆನೇಜ್‌ಮೆಂಟ್, ಕಮ್ಯೂನಿಟಿ ಕ್ವಾಟಾ ಪ್ರವೇಶಕ್ಕಾಗಿರುವ ಕ್ರಮಗಳು ಈಗಿನ ಅದೇ ರೀತಿಯಲ್ಲಿ ಇನ್ನೂ ಮುಂದುವರಿಯಲಿದೆ ಎಂದು ಶಿಕ್ಷಣ ಸಚಿವ ತಿಳಿಸಿದ್ದಾರೆ.
ಪ್ಲಸ್‌ವನ್ ಅರ್ಜಿ ಸಲ್ಲಿಕೆ ಇಂದಿನಿಂದ ಆರಂಭಗೊಂಡಿದ್ದು, 20ರ ತನಕ ಮುಂದುವರಿಯಲಿದೆ. ಅದಾದ ಬಳಿಕ ಟ್ರಯಲ್ ಅಲೋಟ್‌ಮೆಂಟ್ ಮೇ 24ರಂದು ನಡೆಯಲಿದೆ. ನಂತರ ಮೊದಲ ಅಲೋಟ್‌ಮೆಂಟ್ ಜೂನ್ 2ರಂದು, ದ್ವಿತೀಯ ಅಲೋಟ್‌ಮೆಂಟ್ ಜೂನ್ 10 ಮತ್ತು ತೃತೀಯ ಅಲೋಟ್‌ಮೆಂಟ್ ಜೂನ್ 16ರಂದು ನಡೆಯಲಿದೆ.