ಬದಿಯಡ್ಕ ವರ್ಕ್ ಶಾಪ್ನಿಂದ ಕಳವು: ಓರ್ವ ಸೆರೆ; ಮುಖ್ಯ ಆರೋಪಿಗಾಗಿ ಶೋಧ
ಬದಿಯಡ್ಕ: ಇಲ್ಲಿನ ಬೋಳು ಕಟ್ಟೆಯಲ್ಲಿರುವ ವರ್ಕ್ ಶಾಪ್ನ ಬಾಗಿಲು ಮುರಿದು ಒಳನುಗ್ಗಿ ಒಂದು ಲಕ್ಷ ರೂಪಾಯಿ ಮೌಲ್ಯದ ಉಪಕರಣಗಳನ್ನು ಕಳವು ನಡೆಸಿದ ಪ್ರಕರಣದಲ್ಲಿ ಓರ್ವ ಸೆರೆಗೀಡಾಗಿದ್ದಾನೆ.
ಬೋವಿಕ್ಕಾನ ಬಳಿಯ ಮುದಲ ಪ್ಪಾರ ನಿವಾಸಿಯೂ ಮುಳ್ಳೇರಿಯ ಅಡ್ಕದ ಕ್ವಾರ್ಟರ್ಸ್ನಲ್ಲಿ ವಾಸಿಸುವ ಮುಹಮ್ಮದ್ ಶಫೀಕ್ (೩೧) ಎಂಬಾತನನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಈತನಿಗೆ ನ್ಯಾಯಾಲಯ ಎರಡು ವಾರಗಳ ರಿಮಾಂಡ್ ವಿಧಿಸಿದೆ.
ನೆಕ್ರಾಜೆ ಅರ್ತಿಪಳ್ಳ ಕೋಂ ಬ್ರಾಜೆ ನಿವಾಸಿ ತಿಮೋತಿ ಕ್ರಾಸ್ತರ ಮಾಲಕತ್ವದಲ್ಲಿ ಬೋಳುಕಟ್ಟೆಯಲ್ಲಿ ಕಾರ್ಯಾಚರಿಸುವ ವರ್ಕ್ ಶಾಪ್ ನಿಂದ ಇತ್ತೀಚೆಗೆ ಉಪಕರಣಗಳನ್ನು ಕಳವು ನಡೆಸಲಾಗಿದೆ. ಕಳವಿಗೀ ಡಾದ ಉಪಕರಣಗಳ ಪೈಕಿ ಕೆಲವನ್ನು ಪೊಲೀಸರು ಪತ್ತೆಹಚ್ಚಿ ದ್ದಾರೆ. ಕಳವಿನ ಸೂತ್ರಧಾರನಾದ ಇನ್ನೋರ್ವನನ್ನು ಸೆರೆಹಿಡಿಯಲು ಬಾಕಿಯಿದೆ. ಈತನನ್ನು ಪತ್ತೆಹಚ್ಚಲು ಸಾಧ್ಯವಾದರೆ ಮಾತ್ರವೇ ಕಳವು ನಡೆಸಿದ ಎಲ್ಲಾ ಉಪಕರಣಗಳನ್ನು ಪತ್ತೆಹಚ್ಚಲು ಸಾಧ್ಯವಿದೆಯೆಂದು ಪೊಲೀಸರು ಅಂದಾಜಿಸಿದ್ದಾರೆ. ಮುಖ್ಯ ಆರೋಪಿಯನ್ನು ಸೆರೆಹಿಡಿದರೆ ಇನ್ನು ಕೆಲವು ಕಳವು ಪ್ರಕರಣಗಳ ಕುರಿತು ಸುಳಿವು ಲಭಿಸಲಿದೆಯೆಂಬ ನಿರೀಕ್ಷೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.