ಬಸ್‌ನಲ್ಲಿ ಸಾಗಿಸುತ್ತಿದ್ದ ಮದ್ಯ ವಶ

ಉಪ್ಪಳ: ಮಂಜೇಶ್ವರ ಅಬ ಕಾರಿ ಚೆಕ್‌ಪೋಸ್ಟ್‌ನಲ್ಲಿ ಅಧಿಕಾರಿ ಗಳು ನಡೆಸಿದ ತಪಾಸಣೆ ವೇಳೆ ಕರ್ನಾಟಕದಿಂದ ತರಲಾಗುತ್ತಿದ್ದ ೪.೮೭೫ ಲೀಟರ್ ಕರ್ನಾಟಕ ಮದ್ಯ ವಶಪಡಿಸಲಾಗಿದೆ. ನಿನ್ನೆ ಮಧ್ಯಾಹ್ನ ಮಂಗಳೂರಿನಿಂದ ಆಗಮಿಸಿದ ಕೇರಳ ರಾಜ್ಯ ಸಾರಿಗೆ ಬಸ್‌ನಲ್ಲಿ ಮದ್ಯ ಪತ್ತೆಯಾಗಿದೆ. ಆದರೆ ಅದರ ಸಾಗಾಟಗಾರನನ್ನು ಪತ್ತೆಹಚ್ಚಲಾ ಗಿಲ್ಲವೆಂದು ಅಧಿಕಾರಿ ಗಳು ತಿಳಿಸಿದ್ದಾರೆ. ಅಬಕಾರಿ ಇನ್‌ಸ್ಪೆಕ್ಟರ್ ಎಬಿ ತೋಮಸ್, ಪ್ರಿವೆಂಟೀವ್ ಆಫೀಸರ್ ಸಿ.ಕೆ. ವಿ. ಸುರೇಶ್, ಗ್ರೇಡ್ ಪ್ರಿವೆಂಟೀವ್ ಆಫೀಸರ್‌ಗಳಾದ ಮೊಯ್ದೀನ್ ಸಾದಿಕ್, ಜಿಜಿನ್ ಎಂಬಿವರು ನಡೆಸಿದ  ಕಾರ್ಯಾಚರಣೆಯಲ್ಲಿ ಮದ್ಯ ಪತ್ತೆ ಯಾಗಿದೆ. ಪ್ರಕರಣವನ್ನು ಕುಂಬಳೆ ರೇಂಜ್‌ಗೆ ಹಸ್ತಾಂತರಿಸಲಾಗಿದೆ. 

RELATED NEWS

You cannot copy contents of this page