ಬಾಯಿಕಟ್ಟೆ ಶಂಸುಲ್ ಉಲಮ ನಗರದಲ್ಲಿ ಧಾರ್ಮಿಕ ಪ್ರವಚನ 23ರಿಂದ

ಕುಂಬಳೆ: ಉಳುವಾರು ಶಂಸುಲ್ ಉಲಮ ಇಸ್ಲಾಮಿಕ್ ಸೆಂಟರ್ ಹಾಗೂ ಶಾಖಾ ಎಸ್‌ವೈಎಸ್, ಎಸ್‌ಕೆಎಸ್ ಎಸ್‌ಎಫ್ ಇದರ ಜಂಟಿ ಆಶ್ರಯದಲ್ಲಿ ರಂಜಾನ್ ಪ್ರವಚನ ಆಯೋಜಿಸಲಾಗು ವುದು. ಆದಿತ್ಯವಾರದಿಂದ ಮಂಗಳವಾರದವರೆಗೆ ಬಾಯಿಕಟ್ಟೆ ಶಂಸುಲ್ ಉಲಮಾ ನಗರದಲ್ಲಿ ಪ್ರವಚನ ನಡೆಯಲಿದೆ ಎಂದು ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

23ರಂದು ಬೆಳಿಗ್ಗೆ 8.30ಕ್ಕೆ ಮಖಾಂ ಸಿಯಾರತ್ ಬಳಿಕ 2 ಗಂಟೆಗೆ ಎಸ್‌ವೈಎಸ್ ಶಾಖಾ ಅಧ್ಯಕ್ಷ ಕೆ.ಎಂ. ಮೊಹಮ್ಮದ್ ಧ್ವಜಾರೋಹಣ ಗೈಯ್ಯುವರು. ಬಳಿಕ ಮಜ್ಲಿಸುನ್ನೂರ್‌ಗೆ ಹಾದಿ ತಂಙಳ್ ಮೊಗ್ರಾಲ್ ನೇತೃತ್ವ ನೀಡುವರು. 10 ಗಂಟೆಯಿಂದ ಧಾರ್ಮಿಕ ಪ್ರವಚನ ಆರಂಭಗೊಳ್ಳಲಿದ್ದು, ಕೆ.ಬಿ. ಅಬೂಬಕ್ಕರ್ ಅಧ್ಯಕ್ಷತೆಯಲ್ಲಿ ಎನ್.ಪಿ.ಎಂ. ಶರಫುದ್ದೀನ್ ತಂಙಳ್ ಕುನ್ನುಂಗೈ ಉದ್ಘಾಟಿಸುವರು. 

ಅಬ್ದುಲ್ ರಝಾಕ್ ಅಬ್ರಾರಿ ಪ್ರವಚನ ನೀಡುವರು.  ಮುಂದಿನ ದಿನಗಳಲ್ಲಿ ಹಲವು ಗಣ್ಯರು ಭಾಗವಹಿಸುವರು. ಸಮಾರೋಪ ಸಮಾರಂಭ ಕಬೀರ್ ಫೈಸಿಯವರ ಅಧ್ಯಕ್ಷತೆಯಲ್ಲಿ ಕೆ.ಎಸ್. ಶಮೀಮ್ ತಂಙಳ್ ಕುಂಬೋಳ್ ಉದ್ಘಾಟಿಸುವರು. ಸಿರಾಜುದ್ದೀನ್ ಖಾಸಿಮಿ ಪತ್ತನಾಪುರಂ ಧಾರ್ಮಿಕ ಭಾಷಣ ಮಾಡುವರು. ಹಲವರು ಭಾಗವಹಿಸುವರು ಎಂದು ಪದಾಧಿಕಾರಿಗಳಾದ ಕೆ.ಬಿ. ಅಬೂಬಕ್ಕರ್, ಅಬ್ದುಲ್ ಮೀರಾನ್‌ಕುಂಞಿ ಹಾಜಿ, ಯು.ಕೆ. ಖಾದರ್, ಹಸೈನಾರ್, ಮಹಮ್ಮದ್ ಉಳುವಾರ್ ತಿಳಿಸಿದ್ದಾರೆ.

RELATED NEWS

You cannot copy contents of this page