ಬಿಜೆಪಿ ಕುಂಬ್ಡಾಜೆ ಪಂ. ಪ್ರಶಿಕ್ಷಣ ವರ್ಗ

ಕುಂಬ್ಡಾಜೆ: ಬಿಜೆಪಿ ಕುಂಬ್ಡಾಜೆ ಪಂಚಾಯತ್ ಸದಸ್ಯತನ ಅಭಿಯಾನ ಹಾಗೂ ಪಂಚಾಯತ್ ಮಟ್ಟದ ಪ್ರಶಿಕ್ಷಣ ವರ್ಗ ಮವ್ವಾರುನಲ್ಲಿರುವ ಪಕ್ಷದ ಕಚೇರಿಯಲ್ಲಿ ಜರಗಿತು. ರಾಷ್ಟ್ರೀಯ ಸಮಿತಿ ಸದಸ್ಯ ಎಂ. ಸಂಜೀವ ಶೆಟ್ಟಿ ಉದ್ಘಾಟಿಸಿದರು. ಜಿಲ್ಲಾ ಉಪಾಧ್ಯಕ್ಷ ಸುಧಾಮ ಗೋಸಾಡ ಮಾತನಾಡಿದರು. ಪಂ. ಸಮಿತಿ ಅಧ್ಯಕ್ಷ ಹರೀಶ್ ಗೋಸಾಡ ಅಧ್ಯಕ್ಷತೆ ವಹಿಸಿದರು. ರಾಜ್ಯ ಸಮಿತಿ ಸದಸ್ಯ ಶಿವಕೃಷ್ಣ ಭಟ್, ಚುನಾಯಿತ ಸದಸ್ಯರು, ವಿವಿಧ ಮೋರ್ಛಾಗಳ ನೇತಾರರು, ಬೂತ್ ಅಧ್ಯಕ್ಷರು ಭಾಗವಹಿಸಿದರು. ಪ್ರಧಾನ ಕಾರ್ಯದರ್ಶಿ ಶಶಿಧರ ತೆಕ್ಕೆಮೂಲೆ ಸ್ವಾಗತಿಸಿ, ಕಾರ್ಯದರ್ಶಿ ರೋಶಿನಿ ಪೊಡಿಪ್ಪಳ್ಳ ವಂದಿಸಿದರು.

RELATED NEWS

You cannot copy contents of this page