ಬಿದ್ದು ಸಿಕ್ಕಿದ ಚಿನ್ನಾಭರಣ ಮರಳಿಸಿದ ರೋಟರಿ ಸದಸ್ಯನಿಗೆ ಅಭಿನಂದನೆ
ಬದಿಯಡ್ಕ: ಬಿದ್ದು ಸಿಕ್ಕಿದ ಚಿನ್ನಾಭರಣವನ್ನು ವಾರೀಸುದಾರರಿಗೆ ಮರಳಿಸಿದ ರೋಟರಿ ಬದಿಯಡ್ಕ ಘಟಕದ ಸದಸ್ಯ ಕೊರೆಕ್ಕಾನ ಜಗನ್ನಾಥ ರೈಯವರನ್ನು ರೋಟರಿ ಇಂಟರ್ ನ್ಯಾಶನಲ್ ಬದಿಯಡ್ಕ ಘಟಕದ ವತಿಯಿಂದ ಅಭಿನಂದಿಸಲಾಯಿತು. ಅಧ್ಯಕ್ಷ ಕೇಶವ ಪಾಟಾಳಿ ಬಿ, ಕಾರ್ಯದರ್ಶಿ ರಮೇಶ ಆಳ್ವ ಕಡಾರು, ಉಪಾಧ್ಯಕ್ಷ ಗುರುಪ್ರಸಾದ್ ಶೆಣೈ, ಸದಸ್ಯರಾದ ರಾಘವೇಂದ್ರ ಅಮ್ಮಣ್ಣಾಯ, ಕೃಷ್ಣ ಪ್ರತೀಕ್ ಬೆಳ್ಳಿಗೆ, ತಾರನಾಥ ರೈ ಕಡಾರು, ನಿರಂಜನ ರೈ ಪೆರಡಾಲ, ಜಗನ್ನಾಥ ಕುಂಟಾಲುಮೂಲೆ ಜೊತೆಗಿದ್ದರು.