ಬಿ.ಇ.ಎಂ. ಶಾಲಾ ಕಲೋತ್ಸವ ಸಮಾರೋಪ

ಕಾಸರಗೋಡು: ಕಾಸರಗೋಡು ನಗರದ ಬಿಇಎಂ ಹೈಸ್ಕೂಲ್‌ನ 2024-25ನೇ ಶೈಕ್ಷಣಿಕ ವರ್ಷದ ಶಾಲಾ ಕಲೋತ್ಸವ ಅಕ್ಟೋಬರ್ 4ರಂದು ದೀಪ ಬೆಳಗಿಸುವ ಮೂಲಕ ಪ್ರಾರಂಭಗೊಂಡು, ಮರುದಿನ ಸಂಜೆ ತನಕ ಮುಂದುವರಿಯಿತು.

ಶಾಲಾ ಮುಖ್ಯೋಪಾಧ್ಯಾಯ ಗಣೇಶ್ ಅಧ್ಯಕ್ಷತೆ ವಹಿಸಿದರು. ನಿವೃತ್ತ ಅಧ್ಯಾಪಿಕೆ ಪುಷ್ಪಲತಾ ಮುಖ್ಯ ಅತಿಥಿಯಾಗಿ ಭಾಗವಹಿಸಿ, ವಿದ್ಯಾರ್ಥಿಗ ಳಲ್ಲಿ ಸುಪ್ತವಾಗಿರುವ ಒಂದು ವೇದಿಕೆ ಶಾಲಾ ವೇದಿಕೆಯಾಗಿದೆ ಎಂದರು. ಬಳಿಕ ಪುಷ್ಪಲತಾರನ್ನು ಅಧ್ಯಾಪಿಕೆಯ ರಾದ ಶಾಂತಾ ಕುಮಾರಿ ಟೀಚರ್ ಮತ್ತು ರೋ ಹಿತಾಕ್ಷಿ ಟೀಚರ್ ಸನ್ಮಾನಿಸಿ ಗೌರವಿಸಿದರು. ಶಾಲಾ ಮುಖ್ಯೋಪಾ ಧ್ಯಾಯ ಗಣೇಶ್ ಸ್ಮರಣಿಕೆ ನೀಡಿ ಸನ್ಮಾನಿ ಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪ್ರೇಮ್‌ಜಿತ್, ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞದ ಅಧ್ಯಕ್ಷ ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ ಶುಭಾಶಂಸನೆ ಗೈದರು. ಯಶವಂತ ವೈ ಸ್ವಾಗತಿಸಿ, ಅಧ್ಯಾಪಿಕೆ ವಿಶಾಲಾಕ್ಷಿ  ನಿರೂಪಿಸಿದರು. ಶಾಲಾ ಕಲೋತ್ಸವದ ಸಂಚಾಲಕಿ ರೋಹಿತಾಕ್ಷಿ ವಂದಿಸಿದರು.

RELATED NEWS

You cannot copy contents of this page