ಬಿ.ಪಿ. ತಪಾಸಣಾ ಉಪಕರಣಗಳನ್ನು ನೀಡಿ ಭಿನ್ನರೀತಿಯಲ್ಲಿ ಹುಟ್ಟು ಹಬ್ಬ ಆಚರಿಸಿದ ಡಾ| ಜನಾರ್ದನ ನಾಯ್ಕ್

ಕಾಸರಗೋಡು:  ಕಾಸರಗೋಡು ಜನರಲ್ ಆಸ್ಪತ್ರೆಗೆ ರಕ್ತದೊತ್ತಡ ತಪಾಸಣಾ ಉಪಕರಣಗಳನ್ನು ವಿತರಿಸುವ ಮೂಲಕ ಇದೇ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿಯಾದ ಡಾ. ಜನಾರ್ದನ್ ನಾಯ್ಕ್ ಸಿ.ಎಚ್. ಭಿನ್ನವಾದ ರೀತಿಯಲ್ಲಿ ಹುಟ್ಟುಹಬ್ಬ ಆಚರಿಸಿದ್ದಾರೆ.

 ಸಾಧಾರಣವಾಗಿ ಪ್ರತೀ ವರ್ಷ ಡಾ| ಜನಾರ್ದನ್ ನಾಯ್ಕ್ ಜನರಲ್ ಆಸ್ಪತ್ರೆಗೆ ರಕ್ತದಾನ ಗೈದು  ತಮ್ಮ ಹುಟ್ಟುಹಬ್ಬ ಆಚರಿಸುತ್ತಿದ್ದರು. ಆದರೆ ಅವರು ಇತ್ತೀಚೆಗೆ ಆಂಜಿಯೋಪ್ಲಾಸ್ಟ್‌ಗೊಳಗಾಗಿರುವ ಹಿನ್ನೆಲೆಯಲ್ಲಿ ಅವರಿಗೆ ಈ ಬಾರಿ ಹುಟ್ಟು ಹಬ್ಬದಂಗವಾಗಿ ರಕ್ತದಾನ ಮಾಡಲು ಸಾಧ್ಯವಾಗಿರಲಿಲ್ಲ. ಅದರಿಂದಾಗಿ ಅವರು ಆ ರೀತಿಯನ್ನು ಈ ಬಾರಿ ಬದಲಾಯಿಸಿ ರಕ್ತದೊತ್ತಡ ತಪಾಸಣಾ ಉಪಕರ ಣಗಳನ್ನು ಜನರಲ್ ಆಸ್ಪತ್ರೆಯ ಬ್ಲಡ್ ಬ್ಯಾಂಕ್‌ಗೆ ವಿತರಿಸುವ ಮೂಲಕ ಈ ಬಾರಿ ತಮ್ಮ ಹುಟ್ಟು ಹಬ್ಬವನ್ನು ಭಿನ್ನವಾದ ರೀತಿಯಲ್ಲಿ ಆಚರಿಸಿದರು. ಮಾತ್ರವಲ್ಲ ಹುಟ್ಟು ಹಬ್ಬದಂಗ ವಾಗಿ ಅವರು ಆಸ್ಪತ್ರೆಯ ಕುಟುಂಬಶ್ರೀ ಕಾರ್ಯಕರ್ತೆ ಯರು ಮತ್ತು ಆಸ್ಪತ್ರೆಯ ಬೋಯ್ ಸುಂದರರಿಗೆ ಇದೇ ಸಂದರ್ಭದಲ್ಲಿ ಹೊಸ ಬಟ್ಟೆಗಳನ್ನು ವಿತರಿಸಿದರು.

RELATED NEWS

You cannot copy contents of this page