ಬೆಂಕಿ ತಗಲಿ ಮನೆ ನಾಶ: ಅಂಬಾಕ್ಷಿ ರೈಗೆ ಜಿಲ್ಲಾ ಬಂಟರ ಸಂಘದಿಂದ ಸಹಾಯ ಧನ ಹಸ್ತಾಂತರ

ಬಂದಡ್ಕ: ಇಲ್ಲಿಗೆ ಸಮೀಪದ ಬೇತಾಳ ಎಂಬಲ್ಲಿ ಇತ್ತೀಚೆಗೆ ಬೆಂಕಿ ತಗಲಿ ಮನೆ ಸಂಪೂರ್ಣ ನಾಶ ಹೊಂದಿದ ಅಂಬಾಕ್ಷಿ ರೈಯವರಿಗೆ ಜಿಲ್ಲಾ ಬಂಟರ ಸಂಘದ ವತಿಯಿಂದ ಸಹಾಯ ಧನ ನೀಡಲಾಯಿತು.

ಸ್ಥಳಕ್ಕೆ ಇತ್ತೀಚೆಗೆ ಭೇಟಿ ನೀಡಿದ ಬಂಟರ ಸಂಘದ ಅಧ್ಯಕ್ಷ ನ್ಯಾಯವಾದಿ ಸುಬ್ಬಯ್ಯ ರೈ ಜಿಲ್ಲಾ ಸಮಿತಿ ವತಿಯಿಂದ ಸಹಾಯ ಧನ ಹಸ್ತಾಂತರಿಸಿದರು. ಈ ವೇಳೆ ಜಿಲ್ಲಾ ಕಾರ್ಯದರ್ಶಿ ಮೋಹನ್ ರೈ, ಜೊತೆ ಕಾರ್ಯದರ್ಶಿ ಕಿರಣ್ ಮಾಡ ಆದೂರು, ಜಿಲ್ಲಾ ಸಮಿತಿ ಸದಸ್ಯ ರವೀಂದ್ರ ರೈ ಬಂದಡ್ಕ, ಕಾಸರಗೋಡು ವಲಯ ಬಂಟರ ಸಂಘದ ಕಾರ್ಯದರ್ಶಿ ರವೀಂದ್ರ ರೈ ಮಲ್ಲಾವರ,  ವೆಂಕಪ್ಪ ರೈ, ಮನೋಹರ್ ರೈ ಉಪಸ್ಥಿತರಿದ್ದರು.

RELATED NEWS

You cannot copy contents of this page