ಬೈಕ್ ಢಿಕ್ಕಿ ಹೊಡೆದು ಬಾಲಕಿಗೆ ಗಾಯ

ಉಪ್ಪಳ: ರಸ್ತೆ ಬದಿ ನಿಂತಿದ್ದ ಶಾಲಾ ವಿದ್ಯಾರ್ಥಿನಿಗೆ ಬೈಕ್ ಢಿಕ್ಕಿ ಹೊಡೆದ ಘಟನೆಗೆ ಸಂಬಂಧಿಸಿ ಸವಾರನ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ಮುಸೋಡಿ ನಿವಾಸಿ ಮೊಹಮ್ಮದ್ ಎಂಬವರ ಪುತ್ರಿ ಸಹದ (13)ಳಿಗೆ ನಿನ್ನೆ ಬೆಳಿಗ್ಗೆ ಉಪ್ಪಳ ಗೇಟ್‌ನಲ್ಲಿ ಬೈಕ್ ಢಿಕ್ಕಿ ಹೊಡೆದಿದೆ. ಬಾಲಕಿ ರಸ್ತೆ ಬದಿ ಯಲ್ಲಿ ನಿಂತಿದ್ದ ವೇಳೆ ಹೊಸಂಗಡಿಯಿಂದ ಉಪ್ಪಳಕ್ಕೆ ತೆರಳುತ್ತಿದ್ದ ಬೈಕ್ ಢಿಕ್ಕಿ ಹೊಡೆದಿದೆ. ಗಾಯಗೊಂಡ ಬಾಲಕಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು.

You cannot copy contents of this page