ಬೋವಿಕ್ಕಾನದಲ್ಲಿ ರಬ್ಬರ್ ದಾಸ್ತಾನು ಇರಿಸಿದ್ದ ಶೆಡ್ ಬೆಂಕಿಗಾಹುತಿ

ಕಾಸರಗೋಡು: ಬೋವಿಕ್ಕಾನ ರಿಕ್ಸನ್ ಡೇವಿಯರ್ ಚರ್ಚ್‌ನ ಅಧೀನತೆಯಲ್ಲಿರುವ ರಬ್ಬರ್ ದಾಸ್ತಾನು ಕೇಂದ್ರ ಬೆಂಕಿಗಾಹುತಿಯಾಗಿದೆ. ಒಂದು ಲಕ್ಷ ರೂಪಾಯಿಯ ರಬ್ಬರ್ ಶೀಟ್‌ಗಳು ಉರಿದು ನಾಶಗೊಂಡಿದೆ. ನಿನ್ನೆ ಸಂಜೆ 6ಗಂಟೆ ವೇಳೆ  ರಬ್ಬರ್ ದಾಸ್ತಾನಿರಿಸಿದ್ದ ಶೆಡ್‌ನಿಂದ ಹೊಗೆ ಕಾಣಿಸಿಕೊಂಡಿದೆ.  ಕೂಡಲೇ ನಾಗರಿಕರು  ತಲುಪಿ ನೋಡಿದಾಗ ಬೆಂಕಿ ಉರಿಯುತ್ತಿದ್ದು, ಅದನ್ನು ನಂದಿಸಲು ಪ್ರಯತ್ನ ನಡೆಸಿದ್ದಾರೆ. ವಿಷಯ ತಿಳಿದು ಕಾಸರಗೋಡಿನಿಂದ ತಲುಪಿದ ಅಗ್ನಿಶಾಮಕದಳ  ಬೆಂಕಿ ಪೂರ್ಣವಾಗಿ ನಂದಿಸಿದೆ. ಒಣಗಲು ಹಾಕಿದ್ದ 150ರಷ್ಟು ರಬ್ಬರ್ ಶೀಟ್‌ಗಳು ಉರಿದು ನಾಶಗೊಂಡಿದೆ.  ಇದೇ ಶೆಡ್‌ನ ಸಮೀಪವಿರಿಸಿದ್ದ ವಿವಿಧ ವಸ್ತುಗಳು ಕೂಡಾ ಉರಿದು ನಾಶಗೊಂಡಿದೆಯೆಂದು ತಿಳಿಸಲಾಗಿದೆ.

RELATED NEWS

You cannot copy contents of this page