ಕಾಸರಗೋಡು: ಅಸೌಖ್ಯ ಬಾಧಿಸಿ ಚಿಕಿತ್ಸೆಯಲ್ಲಿದ್ದ ಬ್ಯಾಂಕ್ ನೌಕರೆ ಮೃತಪಟ್ಟರು. ಪುಲ್ಲೂರು ಕೊಡವಲಂ ಪಡಂಗೋಟ್‌ನ ಪಿ. ಶೀನ (43) ಮೃತಪಟ್ಟ ದುರ್ದೈವಿ. ಕಿಡ್ನಿ ಸಂಬಂಧ ಅಸೌಖ್ಯ ಬಾಧಿಸಿದ್ದ ಇವರನ್ನು ಮಂ ಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಎಸ್‌ಬಿಐ ಕಾಞಂ ಗಾಡ್ ಶಾಖೆಯ ನೌಕರೆ ಯಾಗಿದ್ದರು. ಪಿ. ದಾಮೋದರನ್-ಸರೋಜಿನಿ ದಂಪತಿಯ ಪುತ್ರಿಯಾದ ಮೃತರು ಸಹೋದರರಾದ ಶಿಜಿ, ಶಿನಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.