ಮಕ್ಕಳ ವಿರುದ್ಧ ದೌರ್ಜನ್ಯ ತಡೆಯಲು ಕಾನೂನು ಕ್ರಮ ಕೈಗೊಳ್ಳಬೇಕು-ಬಾಲಸಂಘ ಮಂಜೇಶ್ವರ ಏರಿಯಾ ಸಮ್ಮೇಳನ

ಮಂಜೇಶ್ವರ: ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಗೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು, ಮಂಜೇಶ್ವರದಲ್ಲಿ ಮಕ್ಕಳಿಗಾಗಿ  ಉದ್ಯಾನವನ ನವೀಕರಿಸಬೇಕು ಎಂದು   ಬಾಲ ಸಂಘ ಮಂಜೇಶ್ವರ ಏರಿಯಾ ಸಮ್ಮೇಳನ  ಆಗ್ರಹಿಸಿದೆ. ಪೈವಳಿಕೆಯಲ್ಲಿ ನಡೆಯಲಿರುವ ಬಾಲ ಸಂಘ ಜಿಲ್ಲಾ ಸಮ್ಮೇಳನ ಯಶಸ್ವಿಗೊಳಿಸಲು ತೀರ್ಮಾನಿಸಲಾಯಿತು.  ಜಿಲ್ಲಾ ಕಾರ್ಯದರ್ಶಿ ಪ್ರವೀಶ ಪ್ರಮೋದ್ ಉದ್ಘಾಟಿಸಿದರು.

ಏರಿಯಾ ಸಮಿತಿ ಅಧ್ಯಕ್ಷೆ  ಪದ್ಮಜಾ ಅಧ್ಯಕ್ಷತೆ ವಹಿಸಿದರು. ನಿಶಿತ್ ಕೋರಿಕ್ಕಾರ್ ಸಂತಾಪ ಠರಾವು ಮಂಡಿಸಿದರು. ನಿಶಿತಾ ಶೆಟ್ಟಿ ಚಟುವಟಿಕಾ ವರದಿ ಮಂಡಿಸಿದರು. ಬಾಲ ಸಂಘ ರಾಜ್ಯ ಸಮಿತಿ ಸದಸ್ಯೆ  ಭಾರತಿ ಎಸ್, ಜಿಲ್ಲಾ ಸಮಿತಿ ಸದಸ್ಯ ಆದರ್ಶ್ ಕಾರಡ್ಕ, ಪ್ರಶಾಂತ್ ಕನಿಲ ಅಭಿನಂದನಾ ಭಾಷಣ ಮಾಡಿದರು. ವಿನಯ ಕುಮಾರ್ ಬಾಯಾರು ಸ್ವಾಗತಿಸಿ, ಕರುಣಾಕರ ಶೆಟ್ಟಿ ವಂದಿಸಿದರು. ನೂತನ ಸಮಿತಿಗೆ ಅಧ್ಯಕ್ಷರಾಗಿ ನಿಶಿತ್ ಕೋರಿಕ್ಕಾರ್, ಕಾರ್ಯದರ್ಶಿಯಾಗಿ ನಿಶಿತಾ ಶೆಟ್ಟಿ, ಸಂಚಾಲಕರಾಗಿ ಭಾರತಿ ಎಸ್, ಕೋ-ಆರ್ಡಿನೇಟರ್ ಆಗಿ   ಪದ್ಮಜಾ ಕುಳೂರು ಸಹಿತ 33 ಮಂದಿಯ ಸಮಿತಿಯನ್ನು ಆಯ್ಕೆ ಮಾಡಲಾಯಿತು

RELATED NEWS

You cannot copy contents of this page