ಮಧೂರು ಕ್ಷೇತ್ರ ಜಾತ್ರೆ: ಇಂದು ನಡುದೀಪೋತ್ಸವ

ಮಧೂರು: ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ವಾರ್ಷಿಕ ಮಹೋತ್ಸವ ಆರಂಭಗೊA ಡಿದ್ದು. ಎಪ್ರಿಲ್ 17ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯ ಲಿದೆ. ಮಹೋತ್ಸವದಂಗವಾಗಿ ಇಂದು ಮುಂಜಾನೆ ದೀಪೋತ್ಸವ, ಉತ್ಸವಬಲಿ ನಡೆಯಿತು. ಮಧ್ಯಾಹ್ನ 12ಕ್ಕೆ ತುಲಾಭಾರ ಸೇವೆಗಳು, 12.30ಕ್ಕೆ ಮಹಾಪೂಜೆ, ಸಂಜೆ 5ಕ್ಕೆ ತಾಯಂಬಕ, ದೀಪಾರಾಧನೆ, ರಾತ್ರಿ 8ಕ್ಕೆ ನಡುದೀಪೋತ್ಸವ, ಉತ್ಸವಬಲಿ, ಸೇವೆಸುತ್ತುಗಳು ನಡೆಯಲಿದೆ.
ನಾಳೆ ಮುಂಜಾನೆ 5ಕ್ಕೆ ಉತ್ಸವ ಬಲಿ, ದೀಪೋತ್ಸವ, ದರ್ಶನಬಲಿ, ಮಧ್ಯಾಹ್ನ 12ಕ್ಕೆ ತುಲಾಭಾರ ಸೇವೆಗಳು, 12.30ಕ್ಕೆ ಮಹಾಪೂಜೆ, 1 ಗಂಟೆಗೆ ಅನ್ನಸಂತರ್ಪಣೆ, ಸಂಜೆ 5ಕ್ಕೆ ತಾಯಂ ಬಕ, ದೀಪಾರಾಧನೆ, ರಾತ್ರಿ 7ಕ್ಕೆ ಉತ್ಸವಬಲಿ, ಮೂಲಸ್ಥಾನ ಉಳಿಯತ್ತಡ್ಕಕ್ಕೆ ಶ್ರೀ ದೇವರ ಘೋಷಯಾತ್ರೆ, 8.30ಕ್ಕೆ ಉಳಿಯತ್ತಡ್ಕದಲ್ಲಿ ಕಟ್ಟೆಪೂಜೆ, 10ಕ್ಕೆ ಮಧೂರುಬೆಡಿಕಟ್ಟೆಯಲ್ಲಿ ಕಟ್ಟೆಪೂಜೆ, ಸಾಂಪ್ರದಾಯಿಕ ಸಿಡಿಮದ್ದು ಪ್ರದರ್ಶನ, 12.30ಕ್ಕೆ ಶಯನ, ಕವಾಟ ಬಂಧನ, 17ರಂದು ಬೆಳಿಗ್ಗೆ 7ಕ್ಕೆ ಕವಾಟೋದ್ಘಾಟನೆ, ಮಧ್ಯಾಹ್ನ 12ಕ್ಕೆ ತುಲಾಭಾರಸೇವೆಗಳು, 12.30ಕ್ಕೆ ಮಹಾಪೂಜೆ, ಸಂಜೆ 5ಕ್ಕೆ ತಾಯಂಬಕ, ದೀಪಾರಾಧನೆ, ರಾತ್ರಿ 8ಕ್ಕೆ ಉತ್ಸವಬಲಿ, 10ಕ್ಕೆ ಶ್ರೀ ಕ್ಷೇತ್ರದ ಕೆರೆಯಲ್ಲಿ ಶ್ರೀ ದೇವರ ಅವಭೃತಸ್ನಾನ, ಬಟ್ಟಲುಕಾಣಿಕೆ, ರಾಜಾಂಗಣ ಪ್ರಾಸಾದ ಬಳಿಕ ಧ್ವಜಾವರೋಹಣ ನಡೆಯಲಿದೆ.
ನಾಳೆ ರಾತ್ರಿ 7ಕ್ಕೆ ಮೂಲಸ್ಥಾನ ಉಳಿಯತ್ತಡ್ಕಕ್ಕೆ ಶ್ರೀ ದೇವರ ಘೋ ಷಯಾತ್ರೆಯೊಂದಿಗೆ ಕಾಸರಗೋಡು ಶ್ರೀ ವೀರಮಾರುತಿ ವ್ಯಾಯಾಮ ಶಾಲೆಯವರಿಂದ ತಾಲೀಮು ಪ್ರದರ್ಶನ ನಡೆಯಲಿರುವುದು.

RELATED NEWS

You cannot copy contents of this page