ಮನೆ ಬಳಿ ಮಾದಕವಸ್ತು ಸೇವನೆಪ್ರಶ್ನಿಸಿದ ಆಟೋ ಚಾಲಕನಿಗೆ ಹಲ್ಲೆ

ನೀರ್ಚಾಲು: ಮನೆ ಬಳಿ ಮಾದಕ ವಸ್ತು ಸೇವಿಸುತ್ತಿದ್ದುದನ್ನು ಪ್ರಶ್ನಿಸಿದ ದ್ವೇಷದಿಂದ ಆಟೋ ಚಾಲಕನಿಗೆ ವ್ಯಕ್ತಿಯೋರ್ವ ಹಲ್ಲೆಗೈದ ಘಟನೆ ನಡೆದಿದೆ.

ನೀರ್ಚಾಲ್‌ನಲ್ಲಿ ಆಟೋ ಚಾಲಕನಾಗಿರುವ ಕಡಂಬಳ ನಿವಾಸಿ ಫಾರೂಕ್ (42) ಎಂಬವರಿಗೆ ಹಲ್ಲೆಗೈಯ್ಯಲಾಗಿದೆ. ಮೊನ್ನೆ ರಾತ್ರಿ ಕಡಂಬಳದಲ್ಲಿ ಫಾರೂಕ್‌ರ ಮನೆ ಬಳಿ ತಂಡವೊಂದು ಮಾದಕ ವಸ್ತು ಸೇವಿಸುತ್ತಿತ್ತೆನ್ನಲಾಗಿದೆ. ಅದನ್ನು ಫಾರೂಕ್ ಪ್ರಶ್ನಿಸಿದ್ದರು. ಈ ದ್ವೇಷ ದಿಂದ ನಿನ್ನೆ ಮಧ್ಯಾಹ್ನ 2.30ಕ್ಕೆ ನೀರ್ಚಾಲು ಆಟೋಸ್ಟಾಂಡ್‌ಗೆ ತಲುಪಿದ ಸಾನು ಎಂಬಾತ ಫಾರೂ ಕ್‌ಗೆ ಹಲ್ಲೆಗೈದು ಗಾಯಗೊಳಿಸಿ ದ್ದಾನೆಂದು ದೂರಲಾಗಿದೆ.

ಫಾರೂಕ್ ಕಾಸರಗೋಡಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಇವರ ದೂರಿನಂತೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

RELATED NEWS

You cannot copy contents of this page