ಮಯೂರ ಕಳತ್ತೂರು ಸಭೆ, ಪದಾಧಿಕಾರಿಗಳ ಆಯ್ಕೆ

ಕುಂಬಳೆ: ಮಯೂರ ಕಳತ್ತೂರು ಇದರ ವಿಶೇಷ ಸಭೆ ಹಿರಿಯ ಕಲಾವಿದ ಮಹಾಬಲ ಭಟ್ ಇವರ ಅಧ್ಯಕ್ಷತೆಯಲ್ಲಿ ಇಚ್ಲಂಪಾಡಿ ಹಿರಿಯ ಬುನಾದಿ ಶಾಲೆಯಲ್ಲಿ ಇತ್ತೀಚೆಗೆ ಜರಗಿತು. ಸಂಘದ ಆಶ್ರಯದಲ್ಲಿ ದಿ| ಮಂಜುನಾಥ ಭಂಡಾರಿ ಪಂಜಳ, ದಿ| ನಾರಾಯಣ ಮಾಸ್ತರ್ ಕಮಾರ್ತೆ ಇವರ ಸ್ಮರಣಾರ್ಥ ಸಮಾಜಮುಖಿ ಕಾರ್ಯ ಕ್ರಮ, ನೂತನ ಸ್ಮಾರಕ ಮಂದಿರ ಗ್ರಂಥಾಲಯದ ರೂಪದಲ್ಲಿ ನಿರ್ಮಿಸಲು, ಸಂಘವನ್ನು ನೂತನವಾಗಿ ನೋಂದಾ ಯಿಸಲು ತೀರ್ಮಾನಿಸಲಾಯಿತು. ನೂತನ ಕಾರ್ಯಕಾರಿ ಸಮಿತಿ ರೂಪೀಕರಿಸಲಾಗಿದ್ದು, ಜಗನ್ನಾಥ ಶೆಟ್ಟಿ ಕುಂಬಳೆ ಗೌರವಾಧ್ಯಕ್ಷರಾಗಿ ಆಯ್ಕೆ ಯಾದರು. ಅಧ್ಯಕ್ಷರಾಗಿ ಕೆ.ಸಿ. ಮೋ ಹನ್ ಕಳತ್ತೂರು, ಉಪಾಧ್ಯಕ್ಷರಾಗಿ ಶ್ರೀನಿವಾಸ ಆಳ್ವ ಕಳತ್ತೂರು, ವೇಣುಗೋಪಾಲ್ ರೈ ಪುತ್ತಿಗೆ, ಕಾರ್ಯದರ್ಶಿಯಾಗಿ ಕೃಷ್ಣ ಕಳತ್ತೂರು, ಜೊತೆ ಕಾರ್ಯದರ್ಶಿಗಳಾಗಿ ಕೆ.ಸಿ. ಗೋಪಾಲ, ಶೇಷಪ್ಪ ಕಳತ್ತೂರು, ಕೋಶಾಧಿಕಾರಿಯಾಗಿ ಪೃಥ್ವಿರಾಜ್ ಪಂಜಳ, ಸದಸ್ಯರಾಗಿ ಕೃಷ್ಣ ಎ. ಕಡಂಗೋಡಿ ಕಿದೂರು, ಯು.ಎಂ. ಮೂಲ್ಯ ಕಿದೂರು, ಶಂಕರ ಬಿ.ಎನ್., ಕೃಷ್ಣ ಚೂಕ್ರಿ, ಪ್ರವೀಣ್‌ರಾಜ್ ಆಳ್ವ ಕಳತ್ತೂರು, ಅಶೋಕ್ ಪುಣಿಯೂರು, ವಿಶ್ವನಾಥ ಶೆಟ್ಟಿ ಕಿದೂರು, ವಸಂತ ಪುಣಿಯೂರು, ಶ್ರೀಧರ ಪುಣಿಯೂರು, ಬಾಲಕೃಷ್ಣ ಮುಂಡ್ರೇಲು, ಪೃಥ್ವಿರಾಜ್ ಕುಂಬಳೆ, ಬಾಬು ಬಂಗೇರ ಪುತ್ತಿಗೆ ಆಯ್ಕೆಯಾದರು. ಶ್ರೀನಿವಾಶ ಆಳ್ವ ಕಳತ್ತೂರು ಸ್ವಾಗತಿಸಿ, ಕೃಷ್ಣ ಕಳತ್ತೂರು ವಂದಿಸಿದರು.

RELATED NEWS

You cannot copy contents of this page