ಮುಂಜುಂಗಾವು ಕ್ಷೇತ್ರದ ಕೆರೆಯಲ್ಲಿ ಸಾವಿರಾರು ಮಂದಿಯಿಂದ ತೀರ್ಥಸ್ನಾನ
ಸೀತಾಂಗೋಳಿ: ತುಲಾ ಸಂಕ್ರಮಣ ಪ್ರಯುಕ್ತ ಮುಜುಂಗಾವು ಶ್ರೀ ಪಾರ್ಥಸಾರಥಿ ದೇವಸ್ಥಾನದ ಕೆರೆಯಲ್ಲಿ ಇಂದು ಸಾವಿರಾರು ಮಂದಿ ತೀರ್ಥಸ್ನಾನಗೈದರು. ಮುಂಜಾನೆ ದೇವರಿಗೆ ಪವಿತ್ರ ಕೆರೆಯ ನೀರಿನಿಂದ ಅಭಿಷೇಕ ನಡೆಸಿದ ಬಳಿಕ ಭಕ್ತರಿಗೆ ಪುಣ್ಯಸ್ನಾನ ನಡೆಸಲು ಅವಕಾಶವೊದಗಿಸ ಲಾಯಿತು. ಇಂದು ಮುಂಜಾನೆಯಿಂದಲೇ ನಾಡಿನ ವಿವಿಧ ಭಾಗಗಳಿಂದ ಸಾವಿರಾರು ಮಂದಿ ಕ್ಷೇತ್ರಕ್ಕೆ ತಲುಪಿದ್ದಾರೆ.
ಬಳಿಕ ತೀರ್ಥಸ್ನಾನ ಮಾಡಿ ಅಕ್ಕಿ, ಹುರುಳಿಯನ್ನು ಸಮರ್ಪಿಸಿ ಶ್ರೀ ದೇವರ ದರ್ಶನ ನಡೆಸಿ ಕೃತಾರ್ಥ ರಾದರು. ಕಾಸರಗೋಡು ಮಾತ್ರವಲ್ಲದೆ ಕರ್ನಾಟಕದ ವಿವಿಧ ಭಾಗಗಳಿಂದಲೂ ಭಕ್ತರು ತಲುಪಿ ತೀರ್ಥಸ್ನಾನದಲ್ಲಿ ಪಾಲ್ಗೊಂಡರು. ತೀರ್ಥಸ್ನಾನ ವೇಳೆ ಯಾವುದೇ ಅಪಾಯ ಸಂಭವಿಸದಂತೆ ಪೊಲೀಸ್ ಹಾಗೂ ಅಗ್ನಿಶಾಮಕ ದಳ ಭದ್ರತೆ ಒದಗಿಸಿದೆ. ಕ್ಷೇತ್ರ ದರ್ಶನಗೈದ ಎಲ್ಲಾ ಭಕ್ತರಿಗೂ ಅನ್ನಸಂತರ್ಪಣೆಯ ವ್ಯವಸ್ಥೆ ಏರ್ಪಡಿಸಲಾಗಿದೆ.