ಕಾಸರಗೋಡು: ಮಂಜೇಶ್ವರ ಬ್ಲೋಕ್ ಪಂಚಾಯತ್ನಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆ (ಪಿಎಂಎವೈ)ಯಿಂದ ಅಧಿಕಾರಿಯೋರ್ವ 16 ಲಕ್ಷ ರೂಪಾಯಿಗಳಷ್ಟು ಹಣವನ್ನು ಲಪಟಾಯಿಸಿದ ಪ್ರಕರಣದಲ್ಲಿ ಸಮಗ್ರ ತನಿಖೆ ನಡೆಸಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಒತ್ತಾಯಿಸಿದ್ದಾರೆ.
ಮಂಜೇಶ್ವರ ಬ್ಲೋಕ್ ಪಂಚಾ ಯತ್ನಲ್ಲಿ ನಡೆದ ಈ ವಂಚನೆಯನ್ನು ಅಪರೂಪದ ಘಟನೆಯಾಗಿ ಕಾಣದೆ ಜಿಲ್ಲೆಯ ಇತರ ಬ್ಲೋಕ್ ಪಂಚಾಯತ್ಗಳು ಹಾಗೂ ಗ್ರಾಮ ಪಂಚಾಯತ್ ಗಳಲ್ಲೂ ತನಿಖೆ ನಡೆಸಬೇಕು. ಯೋಜನೆಯ ಯತಾರ್ಥ ಫಲಾನುಭವಿಗಳಿಗೆ ಲಭಿಸಬೇಕಾದ ಹಣಕಾಸು ಸಹಾಯಕ್ಕೆ ಅಡಚಣೆ ಸೃಷ್ಟಿಸಿ ಯೋಜನೆಯನ್ನು ಬುಡಮೇಲುಗೊಳಿಸಲು ಪ್ರಯತ್ನ ನಡೆದಿದೆಯೇ ಎಂದು ಸಮಗ್ರವಾಗಿ ಪರಿಶೀಲಿಸಬೇಕು. ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ಒಳಗೊಂಡ ಹಲವು ಕುಟುಂಬಗಳು ನಮಗೆ ಸೌಲಭ್ಯಗಳು ಲಭಿ ಸುತ್ತಿಲ್ಲವೆಂದು ದೂರುತ್ತಿರುವಾಗ ಕೇಂದ್ರದಿಂದ ಫಂಡ್ ಲಭಿಸಿಲ್ಲವೆಂಬ ಹೇಳಿಕೆ ಅಧಿಕಾರಿಗಳಿಂದ ಕೇಳಿ ಬರುತ್ತಿದೆ. ಆದರೆ ಮಂಜೇಶ್ವರದಲ್ಲಿ ಹಣಕಾಸು ವಂಚನೆ ನಡೆದಿರು ವುದಾಗಿ ಬಹಿರಂಗಗೊಂಡ ಹಿನ್ನೆಲೆಯಲ್ಲಿ ಇಂತಹ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ ಪರಿಶೀಲಿಸಬೇಕಾದ ಅಗತ್ಯವಿದೆ. ಆದ್ದರಿಂದ ಜಿಲ್ಲೆಯ ಎಲ್ಲಾ ಬ್ಲೋಕ್ ಪಂಚಾಯತ್ ಕಚೇರಿ ಹಾಗೂ ಸಂಬಂಧಪಟ್ಟ ಗ್ರಾಮ ಪಂಚಾಯತ್ಗಳಲ್ಲೂ ಪರಿಶೀಲನೆ ನಡೆಸಬೇಕು.
ಯೋಜನೆಯ ಫಂಡ್ ಬಳಕೆ, ಫಲಾನುಭವಿಗಳ ಪಟ್ಟಿ, ಹಣ ಹಸ್ತಾಂತರಿಸಿದ ದಾಖಲೆಗಳನ್ನು ಪರಿಶೀಲಿಸಬೇಕಾಗಿದೆ. ಈ ಬಗ್ಗೆ ಸಮಗ್ರ ತನಿಖೆಗೆ ಒತ್ತಾಯಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡುವುದಾಗಿ ಎಂ.ಎಲ್. ಅಶ್ವಿನಿ ತಿಳಿಸಿದ್ದಾರೆ.






