ಮುಖ್ಯಮಂತ್ರಿಯ ರಾಜೀನಾಮೆ ಆಗ್ರಹಿಸಿ ಯುಡಿಎಫ್ ಚಳವಳಿ ಇಂದಿನಿಂದ

ಕಾಸರಗೋಡು: ಮುಖ್ಯಮಂತ್ರಿ  ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿದ್ದಾ ರೆಂದೂ, ಅದರ ನೈತಿಕ ಹೊಣೆಗಾರಿಕೆ ಮತ್ತು ಅವರು ತಮ್ಮ ಆ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂಬ ಪ್ರಧಾನ ಬೇಡಿಕೆ ಮುಂದಿರಿಸಿಕೊಂಡು ರಾಜ್ಯದಲ್ಲಿ ಇಂದಿನಿಂದ ಅ.೧೫ರ ತನಕ ರಾಜ್ಯದ ಎಲ್ಲಾ ವಿಧಾನಸಬಾ ಕ್ಷೇತ್ರಗಳ ಮಟ್ಟದಲ್ಲಿ ಚಳವಳಿ ಹೋರಾಟ ನಡೆಸಲು ಯುಡಿ ಎಫ್ ರಾಜ್ಯ ಸಮಿತಿ ತೀರ್ಮಾನಿಸಿದೆ.

‘ರೇಶನ್ ಅಂಗಡಿಯಿಂದ ಆರಂಭಗೊಂಡು ಸೆಕ್ರೆಟರಿಯೇಟ್ ತನಕ’ ಎಂಬ ಹೆಸರಲ್ಲಿ ಈ ಹೋರಾಟ ನಡೆಸಲಾಗುವುದೆಂದು ಯುಡಿಎಫ್ ರಾಜ್ಯ ಸಂಚಾಲಕ ಎಂ.ಎಂ. ಹಸ್ಸನ್ ತಿಳಿಸಿದ್ದಾರೆ. ಇದರ ಅಂಗವಾಗಿ ಅಕ್ಟೋಬರ್ ೧೮ರಂದು ತಿರುವನಂತ ಪುರದ ಸೆಕ್ರೆಟರಿಯೇಟ್‌ಗೆ ಮುತ್ತಿಗೆ ಚಳವಳಿಯನ್ನು ನಡೆಸಲಾಗುವುದು. ಮುಖ್ಯಮಂತ್ರಿ ಮತ್ತು ಸಚಿವರುಗಳು ಪರ್ಯಟನೆ ನಡೆಸುವ ಎಲ್ಲಾ ೧೪೦ ವಿಧಾನಸಭಾ ಕ್ಷೇತ್ರಗಳಲ್ಲೂ ಜನತಾಸಭೆಗಳನ್ನು ನಡೆಸಲಾಗು ವುದೆಂದು ಅವರು ತಿಳಿಸಿದರು.

Leave a Reply

Your email address will not be published. Required fields are marked *

You cannot copy content of this page