ಯುವಕ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಬದಿಯಡ್ಕ: ರಾತ್ರಿ ನಿದ್ರಿಸಲೆಂದು ಬೆಡ್‌ರೂಂಗೆ ತೆರಳಿದ ಯುವಲಕ ನೇಣುಬಿಗಿದು ಸಾವಿಗೀಡಾದ ಸ್ಥಿತಿ ಯಲ್ಲಿ ಪತ್ತೆಯಾದ ಘಟನೆ ನಡೆದಿದೆ.

ಕನ್ಯಪ್ಪಾಡಿ ಬಳಿಯ ಚೋಯಿ ಮೂಲೆ ನಿವಾಸಿ ದಿ| ಸಂಜೀವ ಎಂಬವರ ಪುತ್ರ ಪ್ರವೀಣ್  ಕುಮಾರ್ (32) ಮೃತ ಯುವಕ. ಇವರು ಕೂಲಿ ಕಾರ್ಮಿಕನಾಗಿದ್ದರು. ನಿನ್ನೆ ರಾತ್ರಿ 11.30ರ ವೇಳೆ ಬೆಡ್‌ರೂಂಗೆ ತೆರಳಿದ್ದರು. ಕೊಠಡಿಯಿಂದ ಶಬ್ದ ಕೇಳಿ ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲ್ಲಿ  ಪತ್ತೆಯಾಗಿದ್ದರೆನ್ನಲಾಗಿದೆ. ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ  ಜೀವರಕ್ಷಿಸ ಲಾಗಲಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ.

ಮೃತರು ತಾಯಿ ಉಷಾ, ಪತ್ನಿ ವಿನೀತ, ಮಕ್ಕಳಾದ ವಿವಂತ್, ವಿವೇದ್, ಸಹೋದರ-ಸಹೋದರಿ ಯರಾದ ಪ್ರಕಾಶ್, ಪ್ರಜಿತ್, ಪ್ರಸನ್ನ ಕುಮಾರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page