ಯುವತಿಯರ ಮೋರ್ಫ್ ಮಾಡಲಾದ ನಗ್ನ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಕಳುಹಿಸಿಕೊಡುತ್ತಿದ್ದ ಯುವಕ ಪೊಲೀಸರ ಬಲೆಗೆ

ಕಾಸರಗೋಡು: ಹದಿಹರೆಯದ ಯುವತಿಯ ಫೋಟೋಗಳನ್ನು ಆಪ್ ಮೂಲಕ ಡೌನ್‌ಲೋಡ್ ಮಾಡಿ ಪಡೆದು ಅದರ ದೇಹದ ಭಾಗವನ್ನು ಮೋರ್ಫಿಂಗ್ ಮೂಲಕ ನಗ್ನಗೊಳಿಸಿ ಅದನ್ನು ಇನ್‌ಸ್ಟಾಗ್ರಾಂ ಮೂಲಕ ಸ್ನೇಹಿತರಿಗೆ ಕಳುಹಿಸಿಕೊಡುತ್ತಿದ್ದ ೧೯ರ ಹರೆಯದ ಯುವಕನೋರ್ವನನ್ನು ಚಿತ್ತಾರಿಕಲ್ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಎ.ಐ. ಬೋಟ್ ಎಂಬ ಅಫ್ ಬಳಸಿ ಅದರಲ್ಲಿ ಕಾಣಿಸುವ ಸುಂದರ ಹುಡುಗಿಯರ ಫೋಟೋಗಳನ್ನು ಡೌನ್‌ಲೋಡ್ ಮಾಡಿ ತೆಗೆದು ಅದರ ಮುಖ ಭಾಗವನ್ನು ಹಾಗೇ ಉಳಿಸಿ ದೇಹದ ಭಾಗವನ್ನು ಮೋರ್ಫಿಂಗ್ ಮೂಲಕ ನಗ್ನಗೊಳಿಸಿ ಅದನ್ನು ಈ ಯುವಕ ಆತನ ಸ್ನೇಹಿತರು ಸೇರಿದಂತೆ ಅದೆಷ್ಟೊ ಮಂದಿಗೆ ಇನ್‌ಸ್ಟಾಗ್ರಾಂ, ಫೇಸ್‌ಬುಕ್ ಮತ್ತು ವಾಟ್ಸಪ್ ಮೂಲಕ ಕಳುಹಿಸಿ ಕೊಟ್ಟಿರುವುದನ್ನು ಪತ್ತೆಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸೈಬರ್ ಸೆಲ್ ಪೊಲೀಸರ ಸಹಾಯದಿಂದ ನಡೆಸಿದ ತನಿಖೆಯಲ್ಲಿ ಈ ಯುವಕನನ್ನು ಪೊಲೀಸರು ಪತ್ತೆಹಚ್ಚಿವಶಕ್ಕೆ ತಗೆದುಕೊಂಡಿದ್ದಾರೆ.

RELATED NEWS

You cannot copy contents of this page