ರಾಜೀವ್ ಗಾಂಧಿ ಸ್ಮೃತಿ ದಿನಾಚರಣೆ ಯಶಸ್ವಿಗೊಳಿಸಲು ಕರೆ

ಮಂಜೇಶ್ವರ: ದಿವಂಗತ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಸ್ಮೃತಿ ದಿನಾಚರಣೆ ಈ ತಿಂಗಳ 21 ರಂದು ನಡೆಸಲು ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಸಮಿತಿ ತೀರ್ಮಾನಿಸಿದ್ದು, ಪ್ರಸ್ತುತ ಕಾರ್ಯಕ್ರಮ ಯಶಸ್ವಿಗೊಳಿಸಲು ಪಕ್ಷದ ವಿವಿಧ ಹಂತಗಳ ನಾಯಕರು ಮತ್ತು ಕಾರ್ಯಕರ್ತರಲ್ಲಿ ಕರೆ ನೀಡಿದೆ. 
  ಹೊಸಂಗಡಿಯಲ್ಲಿ ನಡೆದ  ಸಮಿತಿ ಸಭೆಯ ಅಧ್ಯಕ್ಷತೆಯನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಡಿಎಂಕೆ ವಹಿಸಿದ್ದರು. ಹಜ್ ಯಾತ್ರೆ ಕೈಗೊಳ್ಳಲಿರುವ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಖಲೀಲ್ ಬಜಾಲ್‌ರಿಗೆ ಪಕ್ಷದ ವತಿಯಿಂದ ಬೀಳ್ಕೊಡುಗೆ ನೀಡಲಾಯಿತು. ನೇತಾರರಾದ ಉಮ್ಮರ್ ಬೋರ್ಕಳ, ಚಂದ್ರಶೇಖರ ಶೆಟ್ಟಿ ಬೆಜ್ಜ, ಖಲೀಲ್ ಬಜಾಲ್, ಫಾರೂಕ್ ಶಿರಿಯ, ಮೊಹಮ್ಮದ್ ಮಜಾಲ್, ನಾಗೇಶ್ ಮಂಜೇಶ್ವರ, ಪಿ.ಎಂ.ಖಾದರ್ ಹಾಜಿ, ಹನೀಫ್ ಪಡಿಂಞÁರ್, ಯೋಗೇಶ್ ಉದ್ಯಾವರ, ಗಣೇಶ್ ಪಾವೂರು, ಅಜೀಜ್ ಕಲ್ಲೂರು, ಮೊಹಮ್ಮದ್ ಜೆ, ವಸಂತರಾಜ್ ಶೆಟ್ಟಿ, ಸದಾಶಿವ ಕೆ,ರಂಜಿತ್ ಮಂಜೇಶ್ವರ, ಅಬ್ದುಲ್ಲ ಮಾಸ್ಟರ್ ಮೂಡಂಬೈಲ್ ಉಪಸ್ಥಿತರಿದ್ದರು.  ದಿವಾಕರ್ ಎಸ್. ಜೆ.ಸ್ವಾಗತಿಸಿ, ಮುಹಮ್ಮದ್ ಸೀಗಂಡಡಿ ವಂದಿಸಿದರು.

RELATED NEWS

You cannot copy contents of this page