ರಾಷ್ಟ್ರೀಯ ಮುಷ್ಕರ: ಉಪ್ಪಳದಲ್ಲಿ ಪ್ರತಿಭಟನೆ
ಉಪ್ಪಳ: ರಾಷ್ಟ್ರೀಯ ಮುಷ್ಕರ ದಂಗವಾಗಿ ನಡೆದ ಯುಡಿಟಿಎಫ್ ಪ್ರತಿಭಟನಾ ಒಕ್ಕೂಟವನ್ನು ಉಪ್ಪಳದಲ್ಲಿ ಶಾಸಕ ಎಕೆಎಂ ಅಶ್ರಫ್ ಉದ್ಘಾಟಿಸಿದರು. ಕೇಂದ್ರದ ನರೇಂದ್ರ ಮೋದಿ ಹಾಗೂ ರಾಜ್ಯದ ಪಿಣರಾಯಿ ವಿಜಯನ್ ಹಕ್ಕಿಯ ಎರಡು ರೆಕ್ಕೆಗಳಂತೆ ಎಂದು ಅವರು ಆರೋಪಿಸಿದರು. ಸತ್ಯನ್ ಸಿ. ಉಪ್ಪಳ ಅಧ್ಯಕ್ಷತೆ ವಹಿಸಿದರು. ಕೆ.ಪಿ. ಮುನೀರ್ ಸ್ವಾಗತಿಸಿದರು. ವಿವಿಧ ಸಂಘಟನೆಗಳ ಮುಖಂಡರಾದ ಉಮ್ಮರ್, ಶಾಜಿ ಎನ್.ಸಿ, ಮೊಯ್ದೀನ್ ಹೊಸಂಗಡಿ, ಖಮರುದ್ದೀನ್ ಪಾಡಲಡ್ಕ, ಜೆಸ್ಸಿ ಅನಿಲ್ ಕಣ್ವತೀರ್ಥ, ಶಿವರಾಮ್ ಶೆಟ್ಟಿ, ಇಸ್ಸಾಕ್ ಉಪ್ಪಳ, ಹಾರಿಸ್ ಬಂದ್ಯೋಡು, ಅಸೀಸ್ ಕಡಪ್ಪು, ಅಲ್ತಾಫ್ ತಂಙಳ್ ಮಾತನಾಡಿದರು.