ರ‍್ಯಾಗಿಂಗ್ ವಿರುದ್ಧ ಕಠಿಣ ಕ್ರಮ: ಶಿಕ್ಷಣ ಸಂಸ್ಥೆಗಳ ಮೇಲೆ ನಿಗಾ ಇರಿಸಲು ನಿರ್ಧಾರ

ಕಾಸರಗೋಡು:  ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುತ್ತಿರುವ ರ‍್ಯಾಗಿಂಗ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪೊಲೀಸರು ನಿರ್ಧರಿಸಿದ್ದಾರೆ. ಜಿಲ್ಲೆಯ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲೂ ಪೊಲೀಸ್ ಸ್ಪೆಷಲ್ ಸ್ಕ್ವಾಡ್ ನಿಗಾ ಇರಿಸಲಿದೆ. ರ‍್ಯಾಗಿಂಗ್ ಬಗ್ಗೆ ಆರೋಪ  ಕೇಳಿಬಂದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ವಿ. ವಿಜಯಭಾರತ್ ರೆಡ್ಡಿ  ಸ್ಪೆಷಲ್ ಸ್ಕ್ವಾಡ್‌ಗೆ ಈ ನಿರ್ದೇಶ ನೀಡಿದ್ದಾರೆ. ಇತ್ತೀಚೆಗೆ ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ಶಾಲೆ ವಿದ್ಯಾರ್ಥಿ ಗಳ ಮೇಲೆ ರ‍್ಯಾಗಿಂಗ್ ನಡೆಸಲಾಗಿದೆ ಯೆಂಬ ಆರೋಪದಂತೆ ಕೇಸು ದಾಖಲಿಸಲಾಗಿತ್ತು. ಶಿಕ್ಷಣ ಸಂಸ್ಥೆಗಳಲ್ಲಿ ರ‍್ಯಾಗಿಂಗ್ ಪೂರ್ಣವಾಗಿ ಇಲ್ಲದಾ ಗಿಸಲು ಸಂಸ್ಥೆಗಳ, ವಿದ್ಯಾರ್ಥಿಗಳ ಹಾಗೂ ರಕ್ಷಕರ ಸಂಯುಕ್ತ ಪ್ರಯತ್ನ ಅಗತ್ಯವಿದೆ ಎಂದು ತಿಳಿಸಲಾಗಿದೆ. ಶಿಕ್ಷಣ ಸಂಸ್ಥೆಗಳಲ್ಲಿ ರ‍್ಯಾಗಿಂಗ್ ವಿರುದ್ಧ ತಿಳುವಳಿಕಾ ಕಾರ್ಯಕ್ರಮಗಳನ್ನು ನಡೆಸಬೇಕು. ರ‍್ಯಾಗಿಂಗ್‌ನಂತಹ ಅಪರಾಧ ಕೃತ್ಯಗಳನ್ನು ಯಥಾ ಸಮಯ ವರದಿ ಮಾಡದೆ ಮುಚ್ಚಿಡುವ ಸಂಸ್ಥೆಗಳ ವಿರುದ್ದ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ರ‍್ಯಾಗಿಂಗ್‌ಗೆ ಸಂಬಂಧಪಟ್ಟು ದೂರುಗಳನ್ನು ಆಯಾ ಪೊಲೀಸ್ ಠಾಣೆಗಳಿಗೆ ಅಥವಾ ಆಂಟಿ ರ‍್ಯಾಗಿಂಗ್ ಹೆಲ್ಪ್ ನಂಬ್ರವಾದ 1800-180-5522ಕ್ಕೆ ಕರೆಮಾಡಿ ತಿಳಿಸಬಹುದು. ಇ ಮೈಲ್:[email protected],  ವೆಬ್‌ಸೈಟ್: www.antiragging.in.

You cannot copy contents of this page