ನಿಲುಗಡೆ ವಿಷಯದಲ್ಲಿ ವಾಗ್ವಾದ: ಇ-ಆಟೋಗಳಿಗೆ ಪಾಸ್ ನೀಡಲು ನಗರಸಭಾಧ್ಯಕ್ಷೆಗೆ ಮನವಿ

 .

ಕಾಸರಗೋಡು: ನಗರದಲ್ಲಿ ಇ-ಆಟೋ ಕಾರ್ಮಿಕರನ್ನು ಅವಗಣಿಸುತಿ ರುವುದಾಗಿ ದೂರಲಾಗಿದೆ. ಆಟೋ ಗಳಿಗೆ ನಗರದಲ್ಲಿ ಎಲ್ಲಿಯೂ ನಿಲುಗಡೆಗೆ ಅವಕಾಶ ನೀಡಿಲ್ಲ ಎಂಬುದು ಈ ಆರೋಪಕ್ಕೆ ಪ್ರಧಾನ ಕಾರಣವಾಗಿದೆ. ಪೆಟ್ರೋಲ್, ಡೀಸೆಲ್ ಆಟೋ ಚಾಲಕರೊಂದಿಗೆ ಈ ಬಗ್ಗೆ ನಿರಂತರ ವಾಗ್ವಾದಗಳು ಉಂಟಾಗುತ್ತಿದೆ.  ಬಳಿಕ ಅದು ಪೊಲೀಸ್ ಠಾಣೆವರೆಗೆ ತಲುಪಿ ಆರ್ಥಿಕ ಹಾಗೂ ಮಾನಸಿಕವಾದ ಸಮಸ್ಯೆಗಳಿಗೆ ಕಾರಣವಾಗುತ್ತಿದೆ ಎಂದು ಕಾರ್ಮಿಕರು ತಿಳಿಸುತ್ತಾರೆ. ಇತರ ಜಿಲ್ಲೆಗಳಲ್ಲಿ ಇ-ಆಟೋಗಳಿಗೆ ಪಾಸ್ ಮಂಜೂರು ಮಾಡಲಾಗುತ್ತಿದೆ. ಹಲವು ಬಾರಿ ಮನವಿ ನೀಡಿದ್ದರೂ ಕಳೆದ ಒಂದೂವರೆ ವರ್ಷದಿಂದ ಕಾಸರಗೋಡು ನಗರಸಭೆ ಅಧಿಕಾರಿಗಳು ಪರಿಗಣಿಸುತ್ತಿಲ್ಲವೆಂದು ಆರೋಪಿಸಲಾಗಿದೆ.

ಕಣ್ಣೂರಿನಲ್ಲಿ 2೦೦೦ ಆಟೋಗಳಿಗೆ, ಕಲ್ಲಿಕೋಟೆಯಲ್ಲಿ 4೦೦೦ ಆಟೋಗಳಿಗೆ, ಮಂಗಳೂರಿನಲ್ಲಿ 2೦೦೦ ಆಟೋಗಳಿಗೆ ಸಂಚಾರ ಪಾಸ್ ನೀಡಲಾಗಿದೆ. ನಗರದಲ್ಲಿ 150ರಷ್ಟು ಇ-ಆಟೋಗಳು ಈಗಾಗಲೇ ಓಡಾಡುತ್ತಿವೆ.  ಇವರಿಗೆ ತಾತ್ಕಾಲಿಕವಾಗಿ ನಿಲುಗಡೆಗೊಳಿಸಲು ಅನುಮತಿ ನೀಡಲಾಗಿದೆ. ಈ ಬಗ್ಗೆ ಜಿಲ್ಲಾ ಇ-ಆಟೋ ಕಾರ್ಮಿಕರ ಒಕ್ಕೂಟದ ರಕ್ಷಾಧಿಕಾರಿ ಸಿ.ಎ. ಅಬ್ದುಲ್ ರಹ್ಮಾನ್, ಶಫೀಕ್ ಮೀಪುಗುರಿ, ಅಬ್ದುಲ್ ಹಮೀದ್ ಬಾರಿಕ್ಕಾಡ್, ಬಿ. ನಾಗೇಶ್ ಎಂಬಿವರ ನೇತೃತ್ವದಲ್ಲಿ ನಗರಸಭಾ ಅಧ್ಯಕ್ಷೆಗೆ ಮನವಿ ನೀಡಲಾಯಿತು.

You cannot copy contents of this page