ಕುಂಬಳೆಯಲ್ಲಿ ಪಂಚಾಯತ್‌ನ ಸಾರಿಗೆ ಪರಿಷ್ಕಾರ ಪರಾಭವ: ವಾಹನಗಳ ಸಂದಣಿಯಿಂದ ಅಪಘಾತ ಸಮಸ್ಯೆ;ಪರಿಹಾರಕ್ಕೆ ಬಸ್ ನೌಕರರ ಒತ್ತಾಯ

ಕುಂಬಳೆ: ಕುಂಬಳೆ ಪೇಟೆಯಲ್ಲಿ   ಪಂಚಾಯತ್ ಏರ್ಪಡಿಸಿದ ಸಾರಿಗೆ ಪರಿಷ್ಕಾರ ಪೂರ್ಣ ಪರಾಭವಗೊಂಡಿದೆ. ರಸ್ತೆ ಮಧ್ಯೆ ಬಾರಿಕೇಡ್‌ಗಳನ್ನಿರಿಸಿ  ವಾಹನ ನಿಯಂತ್ರಣ ಏರ್ಪಡಿಸುವುದ ರೊಂದಿಗೆ ಪೇಟೆಯಲ್ಲಿ  ಸಾರಿಗೆ ಅಡಚಣೆ ತೀವ್ರಗೊಂಡಿದೆ. ಇದರ ಪರಿಣಾಮ ನಿನ್ನೆ ಸಂಜೆ ೪ ವಾಹನ ಅಪಘಾತಗಳು  ಸಂಭವಿಸಿದೆ. ಒಂದು ಕೆಎಸ್‌ಆರ್‌ಟಿಸಿ ಬಸ್ ಕಾರಿಗೆ  ಹಾಗೂ ಮತ್ತೊಂದು ಕೆಎಸ್‌ಆರ್‌ಟಿಸಿ ಬಸ್ ಇತರ ವಾಹನ ಗಳಿಗೆ ಢಿಕ್ಕಿ ಹೊಡೆದಿದೆ.  ಇದರಿಂದ ಅರ್ಧ ಗಂಟೆ ಕಾಲ ಕೆಎಸ್‌ಟಿಪಿ ರಸ್ತೆಯಲ್ಲಿ ಸಾರಿಗೆ ಅಡಚಣೆ ಎದುರಾಯಿತು. ಬಸ್ ವೈಟಿಂಗ್ ಶೆಡ್ ಸಮೀಪದಲ್ಲಿರುವ ರಸ್ತೆಗೆ ತಡೆಯೊಡ್ಡಿರುವುದು ಸಾರಿಗೆ ಅಡಚಣೆ ತೀವ್ರಗೊಳ್ಳಲು ಕಾರಣವಾಗಿದೆ. ವ್ಯಾಪಾ ರಿಗಳ ಒತ್ತಡದ ಹಿನ್ನೆಲೆಯಲ್ಲಿ ಪಂಚಾ ಯತ್  ಈ ಕ್ರಮ ಕೈಗೊಂಡಿರುತ್ತದೆ.  ಈ ಹೊಸ ಪರಿಷ್ಕಾರಕ್ಕೆ ಬಸ್ ಮಾಲಕರು ಹಾಗೂ ನೌಕರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಪರಿಷ್ಕಾರ  ಬಸ್‌ಗಳ ಪ್ರಯಾಣ ಸಮಯಕ್ಕೆ ತೀವ್ರವಾಗಿ ಬಾಧಿಸುತ್ತಿದೆ ಯೆಂದು ಅವರು ದೂರುತ್ತಿದ್ದಾರೆ. ಬಸ್ ನಿಲ್ದಾಣವನ್ನು ಹೊರತುಪಡಿಸಿ ಬಸ್ ವೈಟಿಂಗ್ ಶೆಡ್‌ನ ಮುಂಭಾಗದಲ್ಲಿ ಬಸ್‌ಗಳನ್ನು ಈಗ ನಿಲ್ಲಿಸಲಾಗುತ್ತದೆ. ಬದಿಯಡ್ಕ, ಸೀತಾಂಗೋಳಿ, ಪೆರ್ಲ, ಪೇರಾಲ್‌ಕಣ್ಣೂರು ಭಾಗದಿಂದ ಬರುವ ಬಸ್‌ಗಳು ಹಳೆಯ ಬಸ್ ನಿಲ್ದಾಣ ಸಮೀಪ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸಿ, ಹತ್ತಿಸಿ ಹೋಗಬೇಕೆಂದು  ಪಂಚಾಯತ್ ಅಧಿಕಾರಿಗಳು ತಿಳಿಸುತ್ತಿದ್ದಾರೆ. 

ಕಳೆದ ಆರು ತಿಂಗಳಿಂದ ಕುಂಬಳೆಯಲ್ಲಿ ಸಾರಿಗೆ ಪರಿಷ್ಕಾರಕ್ಕೆ ಸಂಬಂಧಿಸಿ ಬಸ್ ಮಾಲಕರು ಹಾಗೂ ಪಂಚಾಯತ್‌ನ ಮಧ್ಯೆ ತರ್ಕ ನೆಲೆಗೊಂಡಿದೆ. ಬಸ್‌ಗಳನ್ನು ಹಳೆ ಬಸ್ ನಿಲ್ದಾಣಕ್ಕೆ ಸಾಗಿಸಲು ಸಾಧ್ಯವಾಗದೆಂದು ಬಸ್  ನೌಕರರು  ವ್ಯಕ್ತಪಡಿಸಿದ್ದಾರೆ. ಬಸ್ ನೌಕರರು ಪಂಚಾಯತ್‌ನ ನಿರ್ದೇಶವನ್ನು ಪಾಲಿಸದಿರುವುದರಿಂದ ಇತ್ತೀಚೆಗಿನ ದಿನಗಳಲ್ಲಿ ಕುಂಬಳೆ ಪಂಚಾಯತ್ ಅಧಿಕಾರಿಗಳು ಹಾಗೂ ಪೊಲೀಸರು ಸೇರಿ ಹೊಸ ಬಸ್  ಶೆಲ್ಟರ್‌ನ ಸಮೀಪದ ಯೂಟರ್ನ್ ಬಾರಿಕೇಡ್‌ನ್ನು ಮುಚ್ಚುಗಡೆಗೊಳಿಸಿದ್ದರು. ಇದರಿಂದಾಗಿ ಬದಿಯಡ್ಕ ಭಾಗದಿಂದ ಬರುವ ಬಸ್‌ಗಳಿಗೆ ಹೊಸ ಬಸ್ ಶೆಲ್ಟರ್‌ಗಳಿಗೆ ತಲುಪಲು ಹಳೆಯ ಬಸ್ ಸ್ಟಾಂಡ್ ಸರ್ಕಲ್‌ಗೆ ತೆರಳಿ ಒಂದು ಕಿಲೋ ಮೀಟರ್ ಸುತ್ತಾಡಿ  ಸಂಚರಿಸಬೇಕಾದ  ಸ್ಥಿತಿ ಉಂಟಾಗಿದೆ. ಸಿಮೆಂಟ್‌ನ ತುಂಡುಗಳ ಸಹಿತ ಬಾರಿಕೇಡ್‌ಗ ಳಿಂದ  ಮುಚ್ಚುಗಡೆ ಗೊಳಿಸಿದ ರಸ್ತೆಯನ್ನು ತೆರೆದು ಕೊಡ ಬೇಕೆಂದು ಬಸ್ ನೌಕರರು ಒತ್ತಾಯಿ ಸುತ್ತಿದ್ದಾರೆ. ಪ್ರಸ್ತುತ ಈ ಸಂಬಂಧ ಹೈಕೋರ್ಟ್‌ನಲ್ಲಿ ಕೇಸು  ದಾಖಲಾಗಿದೆ. ಈ ಮಧ್ಯೆ ಅದನ್ನು ಉಲ್ಲಂಘಿಸಿ ಪಂಚಾಯತ್ ಅಧಿಕಾರಿಗಳು ಟ್ರಾಫಿಕ್ ಪರಿಷ್ಕಾರ ನಡೆಸಿದ್ದಾರೆ. ಈಗಿನ ಸಾರಿಗೆ ಪರಿಷ್ಕಾರಕ್ಕೆ ವ್ಯಾಪಾರಿಗಳು ಮಾತ್ರವೇ ಪಂಚಾಯತ್‌ನ್ನು ಬೆಂಬಲಿಸುತ್ತಾರೆ. ಈ ಸಮಸ್ಯೆಗೆ ಶೀಘ್ರ ಪರಿಹಾರ ಕಾಣದಿದ್ದಲ್ಲಿ  ಮುಷ್ಕರ ಸಹಿತ ಚಳವಳಿ ನಡೆಸಲು ಬಸ್ ನೌಕರರು ಆಲೋಚಿಸುತ್ತಿದ್ದಾರೆ.

RELATED NEWS

You cannot copy contents of this page