ಮೊಗ್ರಾಲ್‌ನ ಮಾಹಿನ್ ಸೈಫ್ ನೌಲ್‌ಗೆ ಎನ್‌ಐಟಿಕೆಯಿಂದ ಡಾಕ್ಟರೇಟ್, ಕೇಂದ್ರ ಪ್ಯಾಟೆಂಟ್

ಮೊಗ್ರಾಲ್: ಮೊಗ್ರಾಲ್‌ನ ಮಾಹಿನ್ ಸೈಫ್ ನೌಲ್‌ಗೆ ಸುರತ್ಕಲ್ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನೋಲಜಿಯಿಂದ ಮೆಟಲರ್ಜಿಕಲ್ ಆಂಡ್ ಮೆಟೀರಿಯಲ್ಸ್ ಇಂಜಿನಿಯರಿ ಂಗ್ ವಿಭಾಗದಲ್ಲಿ ಪಿಎಚ್‌ಡಿ ಹಾಗೂ ಕೇಂದ್ರ ಪ್ಯಾಟೆಂಟ್ ಲಭಿಸಿದೆ. ಸಮುದ್ರ ಸಂಪನ್ಮೂಲ ಸಂಸ್ಕರಣೆಯಿಂದಿರುವ ಜೈವ ತ್ಯಾಜ್ಯಗಳನ್ನು ಪ್ರಯೋಜನಪಡಿಸಿ ಅಲ್ಟ್ರಾ ವಯಲೆಟ್ ರಶ್ಮಿಗಳಿಂದ ಸಂರಕ್ಷಣೆ ನೀಡುವ ಪ್ರಕೃತಿಸ್ನೇಹಿ ಪೋಟಿಂಗ್‌ಗಳನ್ನು ಅಭಿವೃದ್ಧಿಪಡಿಸಿ ರುವುದಕ್ಕೆ ಕೇಂದ್ರ ಸರಕಾರದ ಪ್ಯಾಟೆಂಟ್ ಲಭಿಸಿದೆ. ಸಂಶೋಧನೆಯಂಗವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನಾರ್ಹವಾದ ಐದರಷ್ಟು ರಿಸರ್ಚ್ ಪೇಪರ್‌ಗಳನ್ನು ಇವರು ಪ್ರಕಟಿಸಿದ್ದಾರೆ. ಓರ್ವ ಸ್ಪೋರ್ಟ್ಸ್ ಮೆನ್ ಕೂಡಾ ಆಗಿರುವ ಇವರು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ.

You cannot copy contents of this page