ಲಾರಿ ಚಾಲಕನಿಗೆ ಹಲ್ಲೆ: ನಾಲ್ವರ ಸೆರೆ

ಕಾಸರಗೋಡು: ಲಾರಿ ಚಾಲಕನ ಮೇಲೆ ಹಲ್ಲೆ ನಡೆಸಿ ಗಂಭೀರ ಗಾಯ ಗೊಳಿಸಿದ ಪ್ರಕರಣದ ನಾಲ್ವರು ಆರೋಪಿಗಳನ್ನು ಮೇಲ್ಪರಂಬ ಪೊಲೀಸರು ಬಂಧಿಸಿದ್ದಾರೆ.  ಕಳನಾಡು ನಿವಾಸಿಗಳಾದ ಎ.ಪಿ. ಅಕ್ಷಯ್ (25), ಡಿ.ಕೆ. ಅರ್ಜುನ್ (22), ಡಿ.ಎಂ. ಸುದರ್ಶನ್ (22೨) ಮತ್ತು ಕೆ.ವಿ. ಸುಜಿತ್‌ಲಾಲ್ (24) ಬಂಧಿತರಾದ ಆರೋಪಿಗಳು. ಕಾಸರಗೋಡಿನಿಂದ ಹೊಸದುರ್ಗದತ್ತ ಬರುತ್ತಿದ್ದ ಲಾರಿಯ ಚಾಲಕ ಕೊಚ್ಚಿ ಇಡಪಳ್ಳಿ ನಿವಾಸಿ ಕೆ.ಎಸ್. ನಿಯಾಸುದ್ದೀನ್  (33) ಎಂಬವರನ್ನು ಕಳನಾಡು ಪೆಟ್ರೋಲ್ ಬಂಕ್ ಬಳಿ ಜುಲೈ 27ರಂದು ಸಂಜೆ ಲಾರಿಯಿಂದ ಹೊರಕ್ಕೆ ಎಳೆದುಹಾಕಿ ಹಲ್ಲೆ ನಡೆಸಿದ ದೂರಿನಂತೆ ಈ ನಾಲ್ವರ ವಿರುದ್ಧ ಬೇಕಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳು ಸಂಚರಿಸುತ್ತಿದ್ದ ಕಾರಿಗೆ ಲಾರಿ ಢಿಕ್ಕಿ ಹೊಡೆದಿತ್ತು. ಆ ದ್ವೇಷವೇ ಲಾರಿ ಚಾಲಕನ ಮೇಲೆ ಹಲ್ಲೆ ನಡೆಸಲು ಕಾರಣವೆನ್ನಲಾಗಿದೆ. ಗಾಯಗೊಂಡ ನಿಯಾಸುದ್ದೀನ್ ಈಗ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ.

RELATED NEWS

You cannot copy contents of this page